ಮಂಗಳೂರು: ಲಯನ್ ಕಿಶೋರ್ ಡಿ ಶೆಟ್ಟಿಯವರ ನಿರ್ಮಾಣದ, ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಂಚಾಲಕತ್ವದಲ್ಲಿ, ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚನೆಯ,ತುಳುನಾಡ ಕಲಾ ಬಿರ್ಸೆ ದೀಪಕ್ ರೈ ಪಾಣಾಜೆ ಹಾಗೂ ಮಂಗಳೂರು ಮೀನನಾಥ ರಾಘವೇಂದ್ರ ರೈ ಅಭಿನಯದ, ರಂಗ್ ದ ರಾಜೆ ಸುಂದರ್ ರೈ ಮಂದಾರ ನಿರ್ದೇಶನದ ಹಾಗೂ ಅಭಿನಯದ “ಅಮ್ಮ ಕಲಾವಿದೆರ್ ಕುಡ್ಲ” ಇವರ ಈ ವರ್ಷದ ಹೊಸ ನಾಟಕ “ಜಗತ್ತೇ ಶೂನ್ಯ ಸ್ವಾಮಿ” ಇದರ ಮಹೂರ್ತ ಇಂದು ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು.
ಮಹೂರ್ತ ಸಮಾರಂಭಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಅತಿಥಿಗಳಾಗಿ ಆಗಮಿಸಿ ಇಡೀ ನಾಟಕ ತಂಡಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಿರ್ಮಾಪಕರಾದ ಲಯನ್ ಕಿಶೋರ್ ಡಿ ಶೆಟ್ಟಿ,ಸಂಚಾಲಕ ಶಿವಾನಂದ ಶೆಟ್ಟಿ ಮಂಗಲ್ಪಾಡಿ,ನಟ-ನಿರ್ದೇಶಕ ಸುಂದರ್ ರೈ ಮಂದಾರ, ಕಲಾವಿದರಾದ ದೀಪಕ್ ರೈ ಪಾಣಾಜೆ,ಮಂಜುಳಾ ಜನಾರ್ಧನ್,ನಾಟಕ ರಚನೆಕಾರ ಸೋಮನಾಥ ಶೆಟ್ಟಿ ಮಂಗಲ್ಪಾಡಿ ಹಾಗೂ ತಂಡದ ಎಲ್ಲಾ ಕಲಾವಿದರು ಉಪಸ್ಥಿತರಿದ್ದರು.