ಕರಂಡೆಕಾಯಿ ಎಂದರೇನು ಗೊತ್ತಾ? ಕಾಡಿನಲ್ಲಿ ಸಿಗುವ ಈ ಮುಳ್ಳಿನ ಗಿಡದ ಕಾಯಿ ತಿನ್ನದವರು ಇರಲಿಕ್ಕಿಲ್ಲ. ಕರಂಡೆ ಕಾಯಿ ಚಟ್ನಿ, ಪಲ್ಯ, ಉಪ್ಪಿನಕಾಯಿ ನೋಡಿದರೆ ಬಾಯಿಯಲ್ಲಿ ನೀರೂರುತ್ತದೆ. ಕರಂಡೆಕಾಯಿ ವಿಪರೀತ ಹುಳಿ. ಮೈಝುಂ ಎನ್ನಿಸುವ ಹುಳಿ ಪ್ರಿಯರಿಗೆ ಕರಂಡೆಕಾಯಿ ಬಲು ಪ್ರಿಯ. ಕಚ್ಚಾ ಕರಂಡೆಯನ್ನು ಉಪ್ಪಿನ ಜೊತೆ ತಿಂದರೆ ಅದರ ರುಚಿಯೇ ಬೇರೆ.

ಕರಂಡೆಕಾಯಿ ಜೀವಸತ್ವಗಳ ಆಗರ :
ಕರಂಡೆಕಾಯಿಯನ್ನು ಕಡೆಗಣಿಸುವವರೇ ಹೆಚ್ಚು. ಹೆಚ್ಚಾಗಿ ಕಾಡಿನಲ್ಲೇ ಸಿಗುವ ಈ ಹುಳಿ ಕಾಯಿ ಸಾಕಷ್ಟು ಜೀವಸತ್ವಗಳಿವೆ. ಅವುಗಳಲ್ಲಿರುವ ಜೀವಸತ್ವಗಳ ಪಟ್ಟಿ ನೋಡಿದರೆ, ಗ್ರಾಮೀಣರು ಬಿಡಿ, ಪಟ್ಟಣಿಗರೂ ಕೂಡಾ ಸೂಪರ್ ಮಾರ್ಕೆಟ್ಗೆ ತೆರಳಿ ಕರಂಡೆಕಾಯಿ ಇದೆಯಾ ಎಂಬುದನ್ನು ತಪಾಸಣೆ ಮಾಡಿಯಾರು. ಕರಂಡೆಕಾಯಿಯಲ್ಲಿ ಪ್ರೊಟೀನ್, ವಿಟಮಿನ್ ಸಿ, ಅಯರನ್, ಕ್ಯಾಲ್ಸಿಯಂ, ಪಾಸ್ಪರಸ್ , ಫೈಬರ್, ಭರಪೂರ ಇದೆ.
ಇನ್ನು ಕರಂಡೆಕಾಯಿ ಹೆಲ್ತಿಗೆ ಯಾವ ರೀತಿ ಮುಖ್ಯ ನೋಡೋಣ
1. ಇದು ಇಮ್ಯೂನಿಟಿ ಬೂಸ್ಟರ್ (immunity booster) . ಯಾಕಂದರೆ ವಿಟಮಿನ್ ಸಿ ಇದೆ. ಇದು ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ.
2.ಇದರಲ್ಲಿ ಕಬ್ಬಿಣದಂಶ ಇದೆ. ಹಾಗಾಗಿ, ದೇಹದಲ್ಲಿ ಹಿಮೋಗ್ಲೋಬಿನ್ (Hemoglobin) ಕಡಿಮೆ ಆಗಲು ಬಿಡುವುದಿಲ್ಲ
3. ಕರಂಡೆ ಕಚ್ಚಾ ತಿಂದರೆ, ಅಥವಾ ಪಲ್ಯ ಮಾಡಿ ತಿಂದರೆ ದೇಹದಲ್ಲಿ ಕೊಲೆಸ್ಟರಾಲ್ (Cholesterol) ಸ್ತರ ನಿಯಂತ್ರಣದಲ್ಲಿರುತ್ತದೆ.
4. ಕೊಲೆಸ್ಟೆರಾಲ್ ನಿಯಂತ್ರಣದಲ್ಲಿಡುವ ಕಾರಣ ಹೃದಯಕ್ಕೂ ಕರಂಡೆ ಹಿತಕಾರಿ
5. ಇದರಲ್ಲಿ ಫೈಬರ್ ಇದೆ. ಹಾಗಾಗಿ ತಿಂದಾಗ ಹೊಟ್ಟೆ ತುಂಬಿದಂತೆ ಆಗುತ್ತದೆ. ಇದರಿಂದ ನಿಮ್ಮ ತೂಕ ಇಳಿಯುತ್ತದೆ (Weight loss)
ಹಾಗಾಗಿ, ಕಾಡಲ್ಲಿ ಸಿಗೊ ಕಚ್ಚಾ ಕಾಯಿ ಎಂದುಕೊಂಡು ಕರಂಡೆಯನ್ನು ಕಡೆಗಣಿಸಬೇಡಿ. ಇವತ್ತೇ ಮನೆಗೆ ತನ್ನಿ. ತಿನ್ನಿ.