ಪುತ್ತೂರು: ಮೈಸೂರು ಪುತ್ತೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಸಮೀಪದ ಸಂಟ್ಯಾರಿನಲ್ಲಿ ವೇಗವಾಗಿ ಬಂದ ಕಾರೊಂದು ರಸ್ತೆ ಬಳಿ ನಿಲ್ಲಿಸಿದ ಹತ್ತಕ್ಕೂ ಅಧಿಕ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತ ಸಂಭವಿಸಿ ಹಾನಿ ಉಂಟಾದ ಘಟನೆ ಮೇ 27ರಂದು ಸಂಜೆ ಸಂಭವಿಸಿದೆ.
ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬಂದ ಕಾರು ಸಂಟ್ಯಾರು ಜಂಕ್ಷನ್ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆದಿದೆ. ಪಾಣಾಜೆ ಸಹಿತ ಬೇರೆ ಬೇರೆ ಭಾಗದಿಂದ ಖಾಸಗಿ ವಾಹನಗಳಲ್ಲಿ ಬರುವವರು ಸಂಟ್ಯಾರ್‌ಬಳಿ ವಾಹನ ನಿಲ್ಲಿಸಿ ಬಸ್‌ನಲ್ಲಿ ಪುತ್ತೂರು, ಕುಂಬ್ರಕ್ಕೆ ತೆರಳುತ್ತಾರೆ. ಆ ವಾಹನಗಳಿಗೆ ಕಾರು ಢಿಕ್ಕಿ ಹೊಡೆದಿದೆ. ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.