ಅಭಿವೃದ್ಧಿ ಶೂನ್ಯ.ಸದಾ ಧರ್ಮಗಳ ಮಧ್ಯೆ ಕಿಚ್ಚಿಡುವ ಕೆಲಸ.ಯಾವಾಗ ನೋಡಿದರೂ ಹಿಜಾಬ್,ಹಲಾಲ್ ಕಟ್,ವ್ಯಾಪಾರಕ್ಕೆ ದಿಗ್ಬಂಧನ,ಅನೈತಿಕ ಪೋಲಿಸ್ ಗಿರಿ,ದ್ವೇಷ ಭಾಷಣ,ಪರಿಹಾರಗಳಲ್ಲಿ ತಾರತಮ್ಯ, ಧರ್ಮದಂಗಲ್,ಮಿತಿಮೀರಿದ ಭ್ರಷ್ಟಾಚಾರ, ಶಾಸಕ-ಸಚಿವರುಗಳ ಕಾಮಕೇಳಿ…….ಒಟ್ಟಾರೆ, ಬಿ.ಜೆ.ಪಿ.ಆಡಳಿತದಿಂದ ಜನರೋಸಿ ಹೋಗಿದ್ದರು. ಆಡಳಿತ ವಿರೋಧಿ ಅಲೆ ರಾಜ್ಯದಾದ್ಯಂತ ಇತ್ತು.ಜನ ಬದಲಾವಣೆ ಬಯಸಿದ್ದರು.
ಗ್ಯಾರಂಟಿ ಯೋಜನೆಗಳು ಇಲ್ಲದಿದ್ದರೂ ಕಾಂಗ್ರೆಸ್ ಗೆಲ್ಲುತಿತ್ತು.
ಇಂದು ವರ್ಷ ಪೂರೈಸಿದ ಸಿದ್ದು ಸರಕಾರ ಇಡೀ ರಾಷ್ಟ್ರದ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದೆ.ಉಚಿತ ಯೋಜನೆಗಳಿಂದ ಎಲ್ಲಾ ಪಕ್ಷಗಳ,ವರ್ಗಗಳ,ಜಾತಿಗಳ ಜನ ಪ್ರಯೋಜನ ಪಡೆಯುತ್ತಿದ್ದಾರೆ.ವಿರೋಧಿಗಳೂ ಬೆವತಿದ್ದಾರೆ.
ಆದರೆ,ಗಟ್ಟಿ ಸರಕಾರದ ಗೃಹ ಇಲಾಖೆ ಯಾಕೋ ದುರ್ಬಲ ಎನಿಸಿದೆ.ಪರಮೇಶ್ವರವರನ್ನು ಗೃಹ ಮಂತ್ರಿ ಮಾಡಿದಾಗಲೇ ಜನ ನಿರಾಶೆಗೊಂಡಿದ್ದರು.ಡಿಕೆಶಿ,ಖರ್ಗೆ,ಲಾಡ್,ಹರಿಪ್ರಸಾದ್ ರಂತವರನ್ನು ಜನ ನಿರೀಕ್ಷಿಸಿದ್ದರು.
ದ್ವೇಷಭಾಷಣ ನಿಲ್ಲಿಸುತ್ತೇವೆ,ಕಾನೂನಿನ ಮುಂದೆ ಎಲ್ಲರೂ ಸಮಾನರು,ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹರಡುವುದನ್ನು ಸಹಿಸುವುದಿಲ್ಲ…..ಹೀಗೆ ಕೊಟ್ಟ ಭರವಸೆಗಳು,ನೀಡಿದ ಹೇಳಿಕೆಗಳು ಮರತೆ ಹೋಗಿವೆ.
ಪೋಲೀಸ್ ಇಲಾಖೆ ಕೆಲವೆಡೆ ದರ್ಪ ತೋರಿದರೆ,ಕೆಲವೆಡೆ ಬಾಲಮಡಿಚಿಕೊಂಡಿವೆ.
“ದ್ವೇಷ ಹೇಳಿಕೆಗಳು ಎಲ್ಲೋ ಸ್ವಲ್ಪ ಕಮ್ಮಿ ಆಗಿದೆ ಅನಿಸಿದರೂ ,ಅದು ಸರಕಾರಕ್ಕೆ ಹೆದರಿ ಅನ್ನುವುದಕ್ಕಿಂತ ಬಿ.ಜೆ.ಪಿ.ಅವರನ್ನು ನಡೆಸಿಕೊಂಡ ಕಾರಣದಿಂದ ಅನಿಸುತ್ತದೆ.
ಕೆರೆಹಳ್ಳಿಯಂತಹ ಬೀದಿಪೋಕರಿಗಳು ಮುಖ್ಯ ಮಂತ್ರಿಗಳನ್ನೇ ಏಕವಚನದಿಂದ ಕರೆದು ಸರಕಾರಕ್ಕೆ ಸವಾಲು ಹಾಕುತ್ತಾನೆ,ಪೂಂಜಾನಂತಹ ಅನಾಗರಿಕ ಶಾಸಕ ಪೋಲೀಸ್ ಠಾಣೆಗೆ ನುಗ್ಗಿ ಪೋಲೀಸ್ ಇಲಾಖೆಗೆ ಅವಾಜ್ ಹಾಕುತ್ತಾನೆ.ಶರಣ್ ಪಂಪ್ ವೆಲ್ ನಂತಹ ಪಿಂಪ್ ದ್ವೇಷ ಕಾರುತ್ತಾನೆ.ಕೊಲೆ,ಸುಲಿಗೆ,ಭ್ರಷ್ಟಾಚಾರ, ಅತ್ಯಾಚಾರಗಳು ಅವ್ಯಾಹತವಾಗಿವೆ.
ಧರ್ಮಾಧಾರಿತ ತಾರತಮ್ಯ ಹಿಂದಿನಂತಯೇ ಇದೆ.
ಇವೆಲ್ಲಾ ಗೃಹ ಇಲಾಖೆಯ ದೌರ್ಬಲ್ಯ ಅಲ್ಲದೆ ಇನ್ನೇನು?
(“ಈಗ ಕಾಂಗ್ರೆಸ್ ಸರಕಾರ ಇರಬೇಕಿತ್ತು ಎಂದು ನಮಗೂ ಅನಿಸುವಂತಾಗಿದೆ”)
ಸರಕಾರ ಎಚ್ಚೆತ್ತುಕೊಳ್ಳದೇ ಹೋದರೆ ಮುಂದೆ ಪರಿತಪಿಸಬೇಕಾದೀತು.
ಜನತೆಯ ನಿರೀಕ್ಷೆ ಬಹಳಷ್ಟಿದೆ.ಗಳಿಸಿದ ಅಧಿಕಾರವನ್ನು ಉಳಿಸಿಕೊಳ್ಳಬೇಕಾಗಿದೆ.ಬಿ.ಜೆ.ಪಿಯನ್ನು ಶಾಶ್ವತ ವಿರೋಧಪಕ್ಷದಲ್ಲಿ ಕೂರಿಸಬೇಕಾಗಿದೆ.
ಲೇಖನ: ಹೈದರ್ ಆಲಿ ಐವತ್ತೊಕ್ಲು