ಕರ್ನಾಟಕ ಸರಕಾರ ಪದವಿ ಕಾಲೇಜು ಪ್ರಾಧ್ಯಾಪಕ ಅಥವಾ ಸಹಾಯಕ ಪ್ರೊಫೆಸರ್ ಹುದ್ದೆಗೆ ನಡೆಸುವ ಅರ್ಹತಾ ಪರೀಕ್ಷೆಯಲ್ಲಿ ಕೊಣಾಜೆ ಪಜೀರ್ ನಿವಾಸಿ ಮಹಮ್ಮದ್ ಅನ್ಸಾರ್ ಮಾಸ್ಟರ್ ಮನಶಾಸ್ತ್ರ ವಿಭಾಗದ ಜನರಲ್ ವಿಭಾಗದಲ್ಲಿ 17ನೇ ಸ್ಥಾನದಲ್ಲಿಯೂ ಕೆಟಗರಿ ಬಿ ಯಲ್ಲಿ ಮೊದಲ ಸ್ಥಾನದಲ್ಲೂ ಉತ್ತೀರ್ಣರಾಗಿ ಅರ್ಹತೆಯನ್ನು ಗಳಿಸಿದ್ದಾರೆ.
M.Com & M.Sc (Psychology) ಪದವೀಧರರಾಗಿರುವ ಅನ್ಸಾರ್ ರವರು ಆಲ್ ಮದೀನ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ, ದಅವಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಬಹುಮುಖ ಪ್ರತಿಭೆ ಮತ್ತು ಕೌಶಲ್ಯವನ್ನು ಮೈಗೂಡಿಸಿಕೊಂಡಿರುವ ಇವರು ವೃತ್ತಿಪರ ಕೌನ್ಸಲಿಂಗ್ ತಜ್ಞರಾಗಿದ್ದಾರೆ ಹಾಗೂ ವಿದ್ಯಾರ್ಥಿ-ಪೋಷಕ- ಶಿಕ್ಷಕರಿಗೆ ಪ್ರೇರಣಾ ತರಗತಿಗಳನ್ನೂ ನಡೆಸುತ್ತಾರೆ. ಎಳೆಯ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗುವ ಶೈಲಿಯಲ್ಲಿ ಪ್ರಿ ಸ್ಕೂಲುಗಳ ಪಠ್ಯ ಪುಸ್ತಕಗಳನ್ನೂ ತಯಾರಿಸಿ ಒದಗಿಸುತ್ತಿದ್ದಾರೆ. ಸದಾ ಅಧ್ಯಯನ ಶೀಲರಾಗಿರುವ ಇವರು ಪಿ. ಎಚ್. ಡಿ. ಮಾಡುವ ಆಕಾಂಕ್ಷೆ ಹೊಂದಿದ್ದಾರೆ. ಇದೀಗ ಪ್ರತಿಷ್ಠಿತ ನಿಮ್ಹಾನ್ಸ್ ವೈದ್ಯಕೀಯ ಸಂಸ್ಥೆಯು ತನ್ನ ಕ್ಲಿನಿಕಲ್ ಸೈಕಾಲಜಿಸ್ಟ್ ಗಾಗಿ ನಡೆಸುವ ಕ್ಲಿನಿಕಲ್ ಸೈಕಾಲಜಿ ಪ್ರವೇಶ ಪರೀಕ್ಷೆಯ ತಯಾರಿಯಲ್ಲಿದ್ದಾರೆ. ಭವಿಷ್ಯದಲ್ಲಿ ಏನಾದರೂ ಸಾಧಿಸಬೇಕೆಂಬ ಛಲಹೊಂದಿರುವ ಅನ್ಸಾರ್ “ಮಾಸ್ಟರ್” ರವರ ಕನಸುಗಳು ಸಾಕಾರಗೊಳ್ಳಲೆಂದು ಪ್ರಾರ್ಥಿಸೋಣ.
ಅಬ್ದುಲ್ ರಝಾಕ್ ಮಾಸ್ಟರ್, ಅಲ್ ಮದೀನ