ಬೆಂಗಳೂರು : ಒಳಿತು ಮಾಡು ಮನುಷ್ಯ (ರಿ) ಬೆಂಗಳೂರು ಮತ್ತು ಗಿವ್ ಬ್ಲಡ್ ಸೇವ್ ಲೈಫ್ ವಾಟ್ಸಪ್ ಗ್ರೂಪ್ ಜಂಟಿ ಆಶ್ರಯದಲ್ಲಿ ಜುಲೈ 06 ಶನಿವಾರದಂದು ಬೆಂಗಳೂರಿನಲ್ಲಿ ನಡೆದ ಶಿಬಿರದಲ್ಲಿ 54 ಯುನಿಟ್, ಫಝಲ್ ಮೆಮೊರೇಬಲ್ ಮೆಡಿಕಲ್ ಹೆಲ್ಪ್ ಲೈನ್ & ಚಾರಿಟೇಬಲ್ ಟ್ರಸ್ಟ್ (ರಿ.) ಕಬಕ ಇದರ ಎರಡನೇ ವಾರ್ಷಿಕೋತ್ಸವದ ಪ್ರಯುಕ್ತ ಮರ್ಹೂಂ ಮಾಸ್ಟರ್ ಮುಹಮ್ಮದ್ ಫಝಲ್ ಸ್ಮರಣಾರ್ಥ ಜುಲೈ 07 ಆದಿತ್ಯವಾರದಂದು ಪುತ್ತೂರಿನ ಕಬಕದಲ್ಲಿ ನಡೆದ ಶಿಬಿರದಲ್ಲಿ 39 ಯುನಿಟ್ ಹಾಗೂ ಟ್ಯಾಕ್ಸಿ ಮ್ಯಾಕ್ಸಿ ಕ್ಯಾಬ್ ನಿಲ್ದಾಣ ಉದ್ಘಾಟನೆಯ ಪ್ರಯುಕ್ತ ಟ್ಯಾಕ್ಸಿ ಮ್ಯಾಕ್ಸಿ ಕ್ಯಾಬ್ ಚಾಲಕ ಮಾಲಕರ ಸಂಘ ತೊಕ್ಕೊಟ್ಟು (ರಿ) ಜಂಟಿ ಆಶ್ರಯದಲ್ಲಿ ಜುಲೈ 08 ಸೋಮವಾರದಂದು ಮಂಗಳೂರಿನ ತೊಕ್ಕೊಟ್ಟಿನಲ್ಲಿ ನಡೆದ ಶಿಬಿರದಲ್ಲಿ 33 ಯುನಿಟ್ ರಕ್ತ ಸಂಗ್ರಹಿಸಲಾಯಿತು.
ರಕ್ತದಾನ ಮಾಡಿ ಜೀವದಾನಿಯಾದ ಎಲ್ಲಾ 126 ಜನಸ್ನೇಹಿಗಳಿಗೆ ಆಯೋಜಕರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.