ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (ರಿ) ವತಿಯಿಂದ, ಜಾಕ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಕ್ರಿಕೆಟ್ ಕಾರ್ನಿವಲ್ 2025 ಲೀಗ್ ಹಂತದ ಮೊದಲ ಪಂದ್ಯದಲ್ಲಿ ನೌಫಲ್ ಕೃಷ್ಣಾಪುರ ಸಿಡಿಲಬ್ಬರದ ಅರ್ಧ ಶತಕವನ್ನು ದಾಖಲಿಸುವ ಮೂಲಕ ಸಿ.ಎಫ್.ಎಮ್ ಹಿರೋಸ್ ಸೆಮಿಫೈನಲ್ ಆಸೆ ಇನ್ನು ಜೀವಂತವಾಗಿದೆ.
ಟಾಸ್ ಸೋತು ಬ್ಯಾಟಿಂಗ್ ಆಯ್ದುಕೊಂಡ A1 ರಾಯಲ್ಸ್ ತಂಡವು 66 ರನ್‌ಗಳ ಸವಾಲನ್ನು ಸ್ವೀಕರಿಸಿತು. ಆರಂಭಿಕ ಆಟಗಾರ ನಾಯಕ ಸಲಾಂ ಸಮ್ಮಿ ಬೇಗನೆ ನಿರ್ಗಮಿಸಿ ಬಳಿಕ ಕ್ರೀಸ್ ಬೇರೂರಿ ನಿಂತ ನೌಫಲ್ ಮೈದಾನದ ಮೂಲೆಗೂ ಚೆಂಡನ್ನು ಅಟ್ಟಿ ಅತೀ ವೇಗದ ಅರ್ಧ ಶತಕವನ್ನು ಕೇವಲ 22 ಎಸೆತಗಳಲ್ಲಿ ಪೂರ್ತಿಗೊಳಿಸಿದರು. ಇಂದು ನಡೆಯುವ ಪಂದ್ಯದಲ್ಲಿ ಸಿಎಫ್‌ಎಮ್ ಹೀರೋಸ್ ರಾಯಲ್ ತಂಡವನ್ನು ಎದುರಿಸಲಿದೆ.