Home ಇತ್ತೀಚಿನ ಸುದ್ದಿ ದ.ಕ ಜಿಲ್ಲೆ: ಯುವಕನ ಮೇಲೆ ಮಾರಕಾಸ್ತ್ರಗಳಿಂದ ಭೀಕರ ದಾಳಿ, ಕೊಲೆಗೆ ಯತ್ನ

ದ.ಕ ಜಿಲ್ಲೆ: ಯುವಕನ ಮೇಲೆ ಮಾರಕಾಸ್ತ್ರಗಳಿಂದ ಭೀಕರ ದಾಳಿ, ಕೊಲೆಗೆ ಯತ್ನ

0
ದ.ಕ ಜಿಲ್ಲೆ: ಯುವಕನ ಮೇಲೆ ಮಾರಕಾಸ್ತ್ರಗಳಿಂದ ಭೀಕರ ದಾಳಿ, ಕೊಲೆಗೆ ಯತ್ನ

ಸುಳ್ಯ: ದ.ಕ ಜಿಲ್ಲೆಯ ಬೆಳ್ಳಾರೆ ಪೇಟೆಯಲ್ಲಿ ಮತ್ತೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅಟ್ಟಹಾಸ ಮೆರೆದಿದ್ದಾರೆ. ಯುವಕನೊಬ್ಬನ ಕೊಲೆಗೆ ಯತ್ನಿಸಿರುವ ಘಟನೆ ಇದೀಗ ನಡೆದಿದೆ.

ರೌಡಿಶೀಟರ್ ಗಳು ಯುವಕನೊಬ್ಬನ ಮೇಲೆ ಮಾರಣಾಂತಿಕ ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ರಾತ್ರಿ 9:30 ಸಮಯಕ್ಕೆ ನಡೆದಿದೆ.

ರೌಡಿಶೀಟರ್‌ಗಳಾದ, ಅಜರುದ್ದೀನ್ ಮತ್ತು ಜಮಾಲ್ ಬೆಳ್ಳಾರೆ ಪೇಟೆಯಲ್ಲಿ ಆಶೀರ್ ಎಂಬ ಯುವಕ ಬೈಕ್ ನಲ್ಲಿ ಬರುವ ವೇಳೆ ಕಬ್ಬಿಣದ ರಾಡಿನಿಂದ ತಲ್ವಾರನ್ನು ಹೋಲುವ ಆಯುಧ ದಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾರೆ.

ಗಾಯಾಳು ಯುವಕನನ್ನು ಬೆಳ್ಳಾರೆ ಪೊಲೀಸರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

LEAVE A REPLY

Please enter your comment!
Please enter your name here