ಬಂಟ್ವಾಳ, ಜ.4: ಬೋಳಂತೂರು, ನಾರ್ಶದಲ್ಲಿರುವ ಸಿಂಗಾರಿ ಬೀಡಿ ಮಾಲಕರಾದ ಮನೆಗೆ ನಿನ್ನೆ ರಾತ್ರಿ ನಕಲಿ ಈಡಿ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ರೂಪಾಯಿಗಳನ್ನು ದೋಚಿ ಪರಾರಿಯಾದ ಘಟನೆ ನಡೆದಿದೆ.
ನಿನ್ನೆ ರಾತ್ರಿ ಸುಮಾರು 8 ಗಂಟೆಯ ಆಸುಪಾಸಿನಲ್ಲಿ ತಮಿಳುನಾಡು ರಿಜಿಸ್ಟರ್ಡ್ ಕಾರಿನಲ್ಲಿ ಬಂದ ನಕಲಿ ಅಧಿಕಾರಿಗಳು ನೇರ ನೇರವಾಗಿ ಮನೆಗೆ ನುಗ್ಗಿದ್ದು, ಆಂಗ್ಲ ಭಾಷೆಯಲ್ಲಿ ಮಾತಾಡುತ್ತಾ ತನಿಖೆ ನಡೆಸುವವರಂತೆ ನಟಿಸಿ ಲಕ್ಷಾಂತರ ರೂಪಾಯಿ ಹಣ, ಚಿನ್ನವನ್ನು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.