ಮಂಗಳೂರು: ಇನ್ಸ್ಟಾಗ್ರಾಮ್ ಪೇಜ್ ಗಳಲ್ಲಿ ಹೆಚ್ಚು ಲೈಕ್ಸ್ ಹಾಗೂ ಫಾಲ್ಲೋರ್ಸ್ ಮಾಡಿಸುತ್ತೇನೆ ಎಂದು ಹೇಳಿಕೊಂಡು ವಂಚನೆ ಎಸಗಿದ ಹಾರೂನ್ ರಶೀದ್ ಎಂಬವರ ಮೇಲೆ ಉಳ್ಳಾಲ ಠಾಣೆಯಲ್ಲಿ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದಾರೆ.
ವಂಚಕ ತನ್ನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಇತರರಿಂದ ವಿಡಿಯೋ ಮಾಡಿಸಿಕೊಂಡು ಕೂಡ ಪ್ರಮೋಷನ್ ಮಾಡಿಸಿದ್ದಾನೆ ಈತನಿಂದ ಇನ್ನೆಷ್ಟು ಮಂದಿ ವಂಚನೆಗೆ ಒಳಗಾಗಿದ್ದಾರೆ ಎಂಬುದನ್ನು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕರ್ನಾಟಕ ಬೂಸ್ಟ್ ಎಂಬ ಖಾತೆ ಮೇಲೆ ಕೇಸು ದಾಖಲಿಸಿದ್ದಾರೆ.
