ಕರುಣ್ ನಾಯರ್‌ಗೆ ಆದ ಅನ್ಯಾಯ ಭಾರತೀಯ ಕ್ರಿಕೆಟ್‌ನಲ್ಲಿ ಯಾರಿಗೂ ಆಗಿಲ್ಲ..!

ಲೇಖನ: ಸುದರ್ಶನ್ ಲೋಬೊ

ಅವನ ಜಾಗದಲ್ಲಿ ಮುಂಬೈನ ಆಟಗಾರನೇನಾದರೂ ಇದ್ದಿದ್ದರೆ ಇಷ್ಟು ಹೊತ್ತಿಗೆ 50 ಟೆಸ್ಟ್ ಪಂದ್ಯವಾಡಿ ಬಿಡುತ್ತಿದ್ದ. ಆದರೆ.. ಇವನು ಮುಂಬೈನವನಲ್ಲ.. ಭಾರತೀಯ ಕ್ರಿಕೆಟ್’ನಲ್ಲಿ ಸದಾ ತುಳಿತಕ್ಕೊಳಗಾಗುತ್ತಲೇ ಬಂದಿರುವ ಕರ್ನಾಟಕದ ಆಟಗಾರ.. ಬಹುಶಃ ಅದೇ ಮಹಾಪರಾಧವಾಯಿತೋ ಏನೋ..!

ಇಲ್ಲವಾದರೆ ಟೆಸ್ಟ್ ಕ್ರಿಕೆಟ್’ನಲ್ಲಿ ತ್ರಿಶತಕ ಬಾರಿಸಿದ್ದ ಆಟಗಾರನೊಬ್ಬನಿಗೆ ಈ ಪರಿ ಅನ್ಯಾಯವಾಗಲು ಹೇಗೆ ಸಾಧ್ಯ?

ಡಿಸೆಂಬರ್ ತಿಂಗಳು ಬಂದರೆ.. ಕರುಣ್ ನಾಯರ್ ಟೆಸ್ಟ್ ತ್ರಿಶತಕ ಬಾರಿಸಿ 8 ವರ್ಷ ತುಂಬುತ್ತದೆ. ಈ 8 ವರ್ಷಗಳಲ್ಲಿ ಕರುಣ್ ನಾಯರ್’ಗೆ ಆಡಲು ಸಿಕ್ಕಿರುವ ಟೆಸ್ಟ್ ಇನ್ನಿಂಗ್ಸ್’ಗಳ ಸಂಖ್ಯೆ ಕೇವಲ 4.

ಟೆಸ್ಟ್ ಕ್ರಿಕೆಟ್’ನಲ್ಲಿ ತ್ರಿಶತಕ ಬಾರಿಸುವುದೆಂದರೆ ತಮಾಷೆಯಲ್ಲ. ಹೋಗಲಿ, ಎಷ್ಟು ಮಂದಿಗೆ ಇದು ಸಾಧ್ಯವಾಗಿದೆ..? ಗವಾಸ್ಕರ್? ಸಚಿನ್? ದ್ರಾವಿಡ್? ಕೊಹ್ಲಿ? ಯಾರೂ ಇಲ್ಲ. ಈ ಸಾಧನೆ ಮಾಡಿದ ದೇಶದ ಇಬ್ಬರು ಕ್ರಿಕೆಟಿಗರಲ್ಲಿ ವೀರೇಂದ್ರ ಸೆಹ್ವಾಗ್ ಮೊದಲಿಗರಾದರೆ, ಕರುಣ್ ನಾಯರ್ ಎರಡನೆಯವ.

ಟೆಸ್ಟ್’ನಲ್ಲಿ ಮುನ್ನೂರು, 2015ರ ರಣಜಿ ಫೈನಲ್’ನಲ್ಲಿ ಮುನ್ನೂರು.. ಇವೆರಡು ಇನ್ನಿಂಗ್ಸ್ ಸಾಕು, ಕರುಣ್ ನಾಯರ್ ಎಂಥಾ ಪ್ರತಿಭಾವಂತನೆಂಬುದಕ್ಕೆ.

ಹಾಗಾದರೆ ಕರುಣ್ ನಾಯರ್’ಗೆ ಅನ್ಯಾಯ ಮಾಡಿದ್ದು ಯಾರು..?

2016ರಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್’ಗೆ ಆಡುವ ಅವಕಾಶ ಸಿಕ್ಕಿದ್ದೇ ಉಪನಾಯಕ ಅಜಿಂಕ್ಯ ರಹಾನೆ ಗಾಯಗೊಂಡಿದ್ದ ಕಾರಣಕ್ಕೆ. ಸಿಕ್ಕ ಅವಕಾಶದಲ್ಲಿ ಕರುಣ್ ಇತಿಹಾಸವನ್ನೇ ನಿರ್ಮಿಸಿ ಬಿಟ್ಟಿದ್ದ. ಆದರೆ ಮುಂದಿನ ಪಂದ್ಯಕ್ಕೆ ಅಜಿಂಕ್ಯ ವಾಪಸ್ ಬರುತ್ತಿದ್ದಂತೆ ಕರುಣ್ ನಾಯರ್ ಜಾಗ ಖಾಲಿ ಮಾಡಬೇಕಾಯಿತು.

ಉಪನಾಯಕನೆಂಬ ಕಾರಣಕ್ಕೆ ರಹಾನೆಗೆ ದಾರಿ ಬಿಡಬೇಕಿದ್ದದ್ದು ನ್ಯಾಯ. ಆದರೆ ಆ ನ್ಯಾಯ ತೀರ್ಮಾನದಲ್ಲಿ ಕರುಣ್’ಗೆ ಆಗಿದ್ದು ಘೋರ ಅನ್ಯಾಯ.

ಅಲ್ಲಿಂದ ಮುಂದೆ ನಾಲ್ಕೇ ನಾಲ್ಕು ಇನ್ನಿಂಗ್ಸ್’ಗಳಲ್ಲಿ ಕರುಣ್ ನಾಯರ್’ಗೆ ಅವಕಾಶ ಕೊಟ್ಟರು. ನಾಲ್ಕೂ ಅವಕಾಶಗಳಲ್ಲಿ ಕರುಣ್ ಎಡವಿಬಿಟ್ಟ.. ಅಷ್ಟಕ್ಕೇ.. ನಮ್ಮ ಹುಡುಗನಿಗೆ ಭಾರತ ತಂಡದ ಬಾಗಿಲು ಶಾಶ್ವತವಾಗಿ ಮುಚ್ಚಿ ಬಿಟ್ಟಿತು.

ಕರುಣ್ ನಾಯರ್ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡದ್ದೇಕೆ..? Attitude ಕಾರಣಕ್ಕೆ ಎಂಬ ಮಾತುಗಳು ಕೇಳಿ ಬಂದಿದ್ದವು. ಕರುಣ್ ಅಂಥಾ attitude ವ್ಯಕ್ತಿನಾ..? ಖಂಡಿತಾ ಇಲ್ಲ. “ಆತ ಸ್ವಲ್ಪ reserved ಮನುಷ್ಯ. ಹತ್ತಿರದವರನ್ನು ಬಿಟ್ಟು ಬೇರೆಯವರೊಂದಿಗೆ ಅಷ್ಟು ಸುಲಭವಾಗಿ ಬೆರೆಯಲಾರ. ನೋಡುವವರ ಕಣ್ಣಿಗೆ ಇದು ಕೆಲವೊಮ್ಮೆ attitudeನಂತೆ ಕಾಣುತ್ತದೆ ಅಷ್ಟೇ” ಎಂದು
ಕರುಣ್’ನ ಬಾಲ್ಯದ ಕೋಚ್ Shivananda Basappaji ಹಿಂದೊಮ್ಮೆ ಹೇಳಿದ್ದ ನೆನಪು.

ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡ ನಂತರ ಕರ್ನಾಟಕ ತಂಡದಲ್ಲೂ ಕರುಣ್ ನಾಯರ್’ಗೆ ಕೆಟ್ಟ ಕಾಲ ಶುರುವಾಗಿತ್ತು. ತಂಡದ ನಾಯಕನಾಗಿದ್ದಾಗಲೂ ಬ್ಯಾಟ್ ಸದ್ದು ಮಾಡುತ್ತಿರಲಿಲ್ಲ. ಸಾಲು ಸಾಲು ಅವಕಾಶಗಳನ್ನು ವ್ಯರ್ಥ ಮಾಡಿ ಬಿಟ್ಟ. ಸಹಜವಾಗಿಯೇ, ಕರ್ನಾಟಕ ಕ್ರಿಕೆಟ್ ತಂಡದ ಸೆಲೆಕ್ಟರ್ಸ್ ಬದಲಿ ಆಯ್ಕೆಯನ್ನು ನೋಡಿದರು. 31ನೇ ವಯಸ್ಸಲ್ಲಿ ಕರ್ನಾಟಕ ತಂಡದಿಂದ ಹೊರ ಬಿದ್ದ ಕರುಣ್.. ದುರದೃಷ್ಟ.. ಒಂದು ವರ್ಷ ಕ್ರಿಕೆಟ್ ಇಲ್ಲದೆ ಖಾಲಿ ಕೂರುವಂತಾಯಿತು.

“Dear cricket, give me one more chance..” ಎಂದು ಅಂಗಲಾಚುವಷ್ಟರ ಮಟ್ಟಿಗೆ ಕರುಣ್ ಹತಾಶನಾಗಿ ಬಿಟ್ಟ. ಕರ್ನಾಟಕದಲ್ಲಿ ಮುಚ್ಚಿದ ಬಾಗಿಲು ವಿದರ್ಭದಲ್ಲಿ ತೆರೆಯಿತು. 2023-24ನೇ ಸಾಲಿನ ರಣಜಿ ಟೂರ್ನಿಯಲ್ಲಿ ವಿದರ್ಭ ಪರ 10 ಪಂದ್ಯಗಳನ್ನಾಡಿ 2 ಶತಕ, 3 ಅರ್ಧಶತಕಗಳ ಸಹಿತ 690 ರನ್ ಬಾರಿಸಿ ಬಿಟ್ಟ ಕರುಣ್.

ಐಪಿಎಲ್’ನಲ್ಲಿ ಅವಕಾಶ ಸಿಗದಾಗ ಇಂಗ್ಲೆಂಡ್’ನಲ್ಲಿ ಕೌಂಟಿ ಕ್ರಿಕೆಟ್ ಆಡಿ ಬಂದ. ಈಗ ಮಹಾರಾಜ ಟ್ರೋಫಿಯಲ್ಲಿ 8 ಪಂದ್ಯಗಳಲ್ಲಿ ಹತ್ತಿರ ಹತ್ತಿರ 350 ರನ್ ಗಳಿಸಿ ಅಬ್ಬರಿಸುತ್ತಿದ್ದಾನೆ.

ಈಗ ನಾವು ನೋಡುತ್ತಿರುವುದು ಕರುಣ್ 2.0.
37ನೇ ವಯಸ್ಸಲ್ಲಿ ದಿನೇಶ್ ಕಾರ್ತಿಕ್ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿದ ಉದಾಹರಣೆ ಕಣ್ಣ ಮುಂದೆಯೇ ಇರುವಾಗ ನಮ್ಮ ಕರುಣ್ ನಾಯರ್’ಗೆ ಏಕೆ ಅಂಥಾ ಅವಕಾಶ ಸಿಗಬಾರದು..?

 

 

LEAVE A REPLY

Please enter your comment!
Please enter your name here

ಇತ್ತೀಚಿನ ಪೋಸ್ಟ್

ಶಾರೂಖ್ ಖಾನ್ ಗೆ ಕೊಲೆ ಬೆದರಿಕೆ: 50ಲಕ್ಷ ರೂ.ಗೆ ಬೇಡಿಕೆ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಬಳಿಕ ಶಾರುಖ್ ಖಾನ್ ಗೆ...

ಕಾರು ಟೈರ್ ಈ ಕಾರಣಕ್ಕೂ ಸ್ಪೋಟವಾಗುತ್ತಂತೆ!

ವೈರಲ್ ಪೋಸ್ಟ್: ನಿನ್ನೆ ನಡೆದ ರಸ್ತೆ ಅಪಘಾತದಲ್ಲಿ ಔರಂಗಾಬಾದ್‌ನ ಏಳು ಯುವಕರು ಸಾವನ್ನಪ್ಪಿದ್ದರು. ಒಂದೇ...

ಸುಬ್ರಹ್ಮಣ್ಯ ಬಳಿ ರೈಲು ಹಳಿ ಮೇಲೆ ಭೂಕುಸಿತ

ಸುಬ್ರಹ್ಮಣ್ಯ: ಇಲ್ಲಿನ ಸಮೀಪದ ರೈಲ್ವೆ ಹಳಿ ಮೇಲೆ ಶುಕ್ರವಾರ ಜುಲೈ 26...

ಮಹಿಳೆಯರ ಏಷ್ಯಾಕಪ್‌ ಕ್ರಿಕೆಟ್: ಪಾಕಿಸ್ತಾನ ವಿರುದ್ಧ ಭಾರತಕ್ಕೆ ಜಯ

ಡಂಬುಲ (ಶ್ರೀಲಂಕಾ): ಸರ್ವಾಂಗೀಣ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್‌ ಭಾರತ, ವನಿತಾ...

ವಾಮಂಜೂರು ಗುಡ್ಡದಲ್ಲಿ ಭೂ ಕುಸಿತ

ಮಂಗಳೂರು: ವಾಮಂಜೂರು ಬಳಿಯ ಕೆತ್ತಿಕಲ್ಲಿನಲ್ಲಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ರಸ್ತೆ ಅಗಲಗೊಳಿಸಲು...

ವಿಷಯಗಳು

ಶಾರೂಖ್ ಖಾನ್ ಗೆ ಕೊಲೆ ಬೆದರಿಕೆ: 50ಲಕ್ಷ ರೂ.ಗೆ ಬೇಡಿಕೆ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಬಳಿಕ ಶಾರುಖ್ ಖಾನ್ ಗೆ...

ಕಾರು ಟೈರ್ ಈ ಕಾರಣಕ್ಕೂ ಸ್ಪೋಟವಾಗುತ್ತಂತೆ!

ವೈರಲ್ ಪೋಸ್ಟ್: ನಿನ್ನೆ ನಡೆದ ರಸ್ತೆ ಅಪಘಾತದಲ್ಲಿ ಔರಂಗಾಬಾದ್‌ನ ಏಳು ಯುವಕರು ಸಾವನ್ನಪ್ಪಿದ್ದರು. ಒಂದೇ...

ಸುಬ್ರಹ್ಮಣ್ಯ ಬಳಿ ರೈಲು ಹಳಿ ಮೇಲೆ ಭೂಕುಸಿತ

ಸುಬ್ರಹ್ಮಣ್ಯ: ಇಲ್ಲಿನ ಸಮೀಪದ ರೈಲ್ವೆ ಹಳಿ ಮೇಲೆ ಶುಕ್ರವಾರ ಜುಲೈ 26...

ಮಹಿಳೆಯರ ಏಷ್ಯಾಕಪ್‌ ಕ್ರಿಕೆಟ್: ಪಾಕಿಸ್ತಾನ ವಿರುದ್ಧ ಭಾರತಕ್ಕೆ ಜಯ

ಡಂಬುಲ (ಶ್ರೀಲಂಕಾ): ಸರ್ವಾಂಗೀಣ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್‌ ಭಾರತ, ವನಿತಾ...

ಸಂಬಂಧಿತ ಲೇಖನಗಳು

ಜನಪ್ರಿಯ ಲೇಖನಗಳು

ಇತ್ತೀಚಿನ ಪೋಸ್ಟ್