ಮಂಗಳೂರು: ವಿಷನ್ ೨ ಇಂಡಿಯಾ ಸಂಸ್ಥೆಯಾ App ಹಾಗೂ ಲೋಗೋ ಲೋಕಾರ್ಪಣಾ ಕಾರ್ಯಕ್ರಮದ ಪ್ರಯುಕ್ತ ನಟ, ಸ್ಯಾಂಡಲ್ ವುಡ್ ಲವ್ಲೀ ಸ್ಟಾರ್ ನೆನಪಿರಲಿ ಪ್ರೇಮ್ ಇಂದು ಮಂಗಳೂರಿಗೆ ಆಗಮಿಸಿದರು.
ಈ ವೇಳೆ ಸಂಸ್ಥೆಯಾ ಮಾಲಕರಾಗಿರುವಂತಹ, ಸಿರಾಜ್ ಎರ್ಮಾಳ್, ಸಲಾಂ ಸಮ್ಮಿ, ಸಾಬಿತ್ ಕುಂಬ್ರ, ಸಿದ್ದೀಕ್, ಅನ್ವರ್ ಷಾ ಸ್ವಾಗತಿಸಿದರು. ಈ ವೇಳೆ ಮಾರ್ಕೇಟಿಂಗ್ ಪಾಲುದಾರರಾದ ರಿಝ್ವಾನ್ ಕುಂತೂರು, ಮಂಚು ಪುತ್ತೂರು, ಇರ್ಷಾದ್ ಮುಕ್ವೆ, ಅನ್ಹಫ್ ಡೀಲ್ಸ್ ಉಪಸ್ಥಿತರಿದ್ದರು.
ಇಂದು ಸಂಜೆ 4:0೦ ಗಂಟೆಗೆ ಮಂಗಳೂರಿನ ಪುರಭವಣದಲ್ಲಿ ನಡೆಯುವ ವಿಷನ್ ಇಂಡಿಯಾ ಸಂಸ್ಥೆಯಾ App ಬಿಡುಗಡೆ ಕಾರ್ಯಕ್ರಮ ಪ್ರೇಮ್ ಭಾಗವಹಿಸಲಿದ್ದಾರೆ. ಜೊತೆಗೆ ತುಳು ಚಿತ್ರರಂಗ ನಟ ಅರವಿಂದ ಬೋಳಾರ್, ಸುಂದರ ರೈ ಮಂದಾರ ಹಾಗೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸಾರ್ವಜನಿಕರು ಬಂದು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಮನವಿ ಮಾಡಿದ್ದಾರೆ.