Home ತಾಜಾ ಸುದ್ದಿಗಳು ಇಪ್ಪತ್ತು ತಿಂಗಳು ಪೂರ್ಣಗೊಳಿಸಿದ ಕೈ ಸರ್ಕಾರ ಪೊಲೀಸ್ ಶ್ರಮಕ್ಕೆ ಸಿಹಿ ಸುದ್ದಿ ಕೊಟ್ಟಿದೆ….!

ಇಪ್ಪತ್ತು ತಿಂಗಳು ಪೂರ್ಣಗೊಳಿಸಿದ ಕೈ ಸರ್ಕಾರ ಪೊಲೀಸ್ ಶ್ರಮಕ್ಕೆ ಸಿಹಿ ಸುದ್ದಿ ಕೊಟ್ಟಿದೆ….!

0
ಇಪ್ಪತ್ತು ತಿಂಗಳು ಪೂರ್ಣಗೊಳಿಸಿದ ಕೈ ಸರ್ಕಾರ ಪೊಲೀಸ್ ಶ್ರಮಕ್ಕೆ ಸಿಹಿ ಸುದ್ದಿ ಕೊಟ್ಟಿದೆ….!

ಇಪ್ಪತ್ತು ತಿಂಗಳು ಪೂರ್ಣಗೊಳಿಸಿದ ಕೈ ಸರ್ಕಾರ ಪೊಲೀಸ್ ಶ್ರಮಕ್ಕೆ ಸಿಹಿ ಸುದ್ದಿ ಕೊಟ್ಟಿದೆ….!

ಬೆಂಗಳೂರು: ಕರ್ನಾಟಕ ಏಕೀಕರಣದ ಸುವರ್ಣ ಮಹೋತ್ಸವದ ಅಂಗವಾಗಿ ಪೊಲೀಸ್ ಇಲಾಖೆಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಹತ್ವದ ಘೋಷಣೆ ಮಾಡಿದ್ದಾರೆ. ರಾಜ್ಯದ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಬೆಳ್ಳಿ ಪದಕ ರಾಜ್ಯದ ಎಲ್ಲಾ ಪೊಲೀಸರ ವೈದ್ಯಕೀಯ ವೆಚ್ಚ 1000 ದಿಂದ 1500 ಕ್ಕೆ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿ ಪೊಲೀಸ್ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ.

ದುರ್ಬಲ ವರ್ಗಕ್ಕೆ ನೇರವಾಗಲಲು ಸೂಚನೆ:

ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡು ಮಾತನಾಡಿದರು. ಪ್ರತಿ ವರ್ಷ ಹೊಸ ವರ್ಷದಲ್ಲಿ ಪೊಲೀಸ್ ಇಲಾಖೆ ಜೊತೆ ಸಭೆ ಮಾಡ್ತಾರೆ. ನಾನು ಹಾಗೂ ಗೃಹಸಚಿವರು ಗೃಹ ಇಲಾಖೆಯ ಕಾರ್ಯದರ್ಶಿ ಸೇರಿ ಸಭೆ ಮಾಡಿದ್ದೀವಿ. ನಾವು ಅಧಿಕಾರಕ್ಕೆ ಬಂದು ಇದೇ ತಿಂಗಳ 20ಕ್ಕೆ 8 ತಿಂಗಳು ತುಂಬುತ್ತೆ, ಅಧಿಕಾರಿಗಳಿಗೆ ಸರ್ಕಾರ ಪೊಲೀಸರಿಂದ ಏನು ನಿರೀಕ್ಷೆ ಮಾಡ್ತೀವಿ ಅಂತ ಹೇಳಲಾಗಿದೆ. ಕಾನೂನು ಸುವ್ಯವಸ್ಥೆ ಚೆನ್ನಾಗಿ ಇರಬೇಕು ಅಂತ ಹೇಳಲಾಗಿದೆ. ಅದನ್ನ ಸರ್ಕಾರ ಪೊಲೀಸ್ ಇಲಾಖೆಯಿಂದ ನಿರೀಕ್ಷೆ ಮಾಡ್ತೀವಿ. ಸಮಾಜದಲ್ಲಿ ಇರೋ ದುರ್ಬಲ ವರ್ಗದವರಿಗೆ ರಕ್ಷಣೆಯನ್ನು ಕೊಡಬೇಕು ಮತ್ತು ಅವರಲ್ಲಿ ಧೈರ್ಯ ತುಂಬಿ ಪೊಲೀಸ್ ವ್ಯವಸ್ಥೆ ಮೇಲೆ ನಂಬಿಕೆ ಬರುವಂತೆ ನೋಡಿಕೊಳ್ಳಬೇಕು ಮತ್ತು ಮನೆಯಲ್ಲಿ ಒಂಟಿಯಾಗಿ ಇರೋರಿಗೆ ರಕ್ಷಣೆ ಕೊಡಬೇಕು ಅಂತ ಸೂಚಿಸಲಾಗಿದೆ.

ಹೆಚ್ಚುತ್ತಿರುವ ಸೈಬರ್ ಕ್ರೈಂ ತಡೆಗೆ ಆಧುನಿಕ ತಂತ್ರಜ್ಞಾನ ಬಳಕೆ:

ಅಲ್ಲದೇ, ಎಸ್ ಪಿ, ಡಿಸಿಪಿ, ಡಿಐಜಿ ಎಲ್ಲರೂ ಪೊಲೀಸ್ ಠಾಣೆಗಳಿಗೆ ಕಾಲ ಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲು ಹೇಳಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ನಮ್ಮ ಪೊಲೀಸರು ಪ್ರಯತ್ನ ಹೆಚ್ಚು ಮಾಡಿದ್ದಾರೆ. ನಮ್ಮಲ್ಲಿ ಇಲ್ಲಿವರೆಗೂ ಯಾವುದೇ ಕೋಮು ಗಲಭೆ ನಡೆದಿಲ್ಲ, ಸಣ್ಣಪುಟ್ಟದ್ದು ಆಗಿದೆ ಬಿಟ್ಟರೇ ದೊಡ್ಡಮಟ್ಟದಲ್ಲಿ ಏನು ಆಗಿಲ್ಲ. ಸೈಬರ್ ಕ್ರೈಂಗಳು ಹೆಚ್ಚಾಗ್ತಾ ಇವೆ, ಹೀಗಾಗಿ ಅದಕ್ಕೆ ಹೆಚ್ಚು ಗಮನ ಕೊಡಲು ಹೇಳಲಾಗಿದೆ. ಆಧುನಿಕ ತಂತ್ರಜ್ಞಾನ ಇರೋ ಉಪಕರಣಗಳನ್ನು ಬಳಸಿ ಅಪರಾಧ ತಡೆಯಲು ಹೇಳಲಾಗಿದೆ.

ಠಾಣೆಗೆ ಬಂದು ದೂರು ಕೊಟ್ಟರೇ FIR ಗಳನ್ನು ಆದಷ್ಟು ಮಾಡಬೇಕು, ಠಾಣೆಗೆ ಬಂದೋರಿಗೆ ಸ್ಪಂದಿಸಬೇಕು. FIR ಬಳಿಕ‌ ಗುಣಮಟ್ಟದ ತನಿಖೆ ಆಗಬೇಕು. ಗುಣಮಟ್ಟದ ತನಿಖೆ ಆದ್ರೆ ಶಿಕ್ಷೆಯ ಪ್ರಮಾಣ ಜಾಸ್ತಿ ಆಗುತ್ತೆ ಇಲ್ಲ ಅಂದ್ರೆ ಶಿಕ್ಷೆ ಪ್ರಮಾಣ ಕಡಿಮೆ ಆಗುತ್ತೆ. ತನಿಖಾಧಿಕಾರಿಗಳಿಗೆ ಹಿರಿಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಬೇಕು. ಚಾರ್ಜ್ ಶೀಟ್ ವಿಳಂಬ ಆಗದಂತೆಯೂ ಸೂಚನೆ ನೀಡಲಾಗಿದೆ. ದೌರ್ಜನ್ಯ ಪ್ರಕರಣಗಳಲ್ಲಿ 60 ದಿನಗಳ ಒಳಗೆ ಕೋರ್ಟ್ ಗೆ ವಿಳಂಬ ಮಾಡದೆ ಜಾರ್ಜ್ ಶೀಟ್ ಸಲ್ಲಿಕೆ ಮಾಡಬೇಕು ಎಂದು ಹೇಳಿದರು.

ಮುಖ್ಯ ಮಂತ್ರಿಗಳು ಪ್ರಮುಖವಾಗಿ, CEN ಠಾಣಾಧಿಕಾರಿಗಳ ಹುದ್ದೆಯನ್ನು ACP ಮತ್ತು DCP ಮಟ್ಟಕ್ಕೆ ಉನ್ನತೀಕರಣ ಮಾಡುವುದು. ಬೆಂಗಳೂರು ನಗರದಲ್ಲಿ 8 ಅಡಿಷನಲ್ DCP ಹುದ್ದೆಗಳನ್ನು ಹೆಚ್ಚುವರಿಯಾಗಿ ಸೃಜಿಸಲಾಗುವುದು. ರಾಜ್ಯವನ್ನು ಡ್ರಗ್ ಮುಕ್ತ ಗೊಳಿಸುವ ದಿಕ್ಕಿನಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳುವ ಹಾಗೂ ಕಳೆದ ಆರು ತಿಂಗಳಲ್ಲಿ ಪೊಲೀಸರು 27 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ್ದಾರೆ. ಈ ಡ್ರಗ್ಸ್ ನ ಫೆಬ್ರವರಿಯಲ್ಲಿ ನಾಶ ಮಾಡಲು ಉನ್ನತ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ಹಗಲಿರುಳು ಮಳೆ ಗಾಳಿ ಲೆಕ್ಕಿಸದೆ ನಾಡಿನ ರಕ್ಷಣೆ ಮಾಡುತ್ತಿರುವ ಪೊಲೀಸ್ ವ್ಯವಸ್ಥೆಗೆ ಒಂದು ಸಲಾo:

ಏನೇ ಆಗಲಿ ಹಗಲು ಇರುಳು ಜನ ನೆಮ್ಮದಿಯಿಂದಿರಲು ಅವರ ಕುಟುಂಬದಿಂದ ಸದಾ ದೂರ ಇರುತ್ತಾ ನಮ್ಮ ರಕ್ಷಣೆ ಮಾಡುವಲ್ಲಿ ಪೊಲೀಸರ ಪಾತ್ರ ಅಪಾರ. ಎಂದಿಗೂ ಅವರ ಸೇವೆಗೆ ನಾವು ಋಣಿಯಾಗಲೇ ಬೇಕು. ಅವರ ನೆಮ್ಮದಿ ಕಳೆದುಕೊಂಡು ರಾತ್ರಿ ಎನ್ನದೇ ಮಳೆ ಎನ್ನದೆ ಬಿಸಿಲೆನ್ನದೆ ಅವರು ಅನಾರೋಗ್ಯದಿಂದ ಬಳಳಿದರು ಪ್ರಾಮಾಣಿಕ ಸೇವೆ ಮಾಡುತ್ತಾ ಜನರನ್ನು ಎಲ್ಲಾ ರೀತಿಯಲ್ಲಿ ರಕ್ಷಣೆ ಮಾಡುತ್ತಿರುತ್ತಾರೆ ಇಂತಹ ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಸಾಕಷ್ಟು ಸಮಸ್ಯೆಗಳನ್ನು ಹೊಂದಿದ್ದು ಸರ್ಕಾರ ಅವರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ನಮ್ಮ ನಾಡಿನ ಪೊಲೀಸ್ ವ್ಯವಸ್ಥೆ ನಸು ನಕ್ಕರೆ ನಾಡಿನ ಜನತೆ ಸದಾ ನಗುತ್ತಲೇ ನೆಮ್ಮದಿ ಜೀವನ ನಡೆಸುತ್ತಾರೆ. ಅದರಿಂದ ನಮ್ಮನ್ನು ರಕ್ಷಣೆ ಮಾಡುವ ಪೊಲೀಸ ಮತ್ತು ಅವರ ಕುಟುಂಬ ಸರ್ಕಾರದಿoದ ಎಲ್ಲಾ ಸೌಲತ್ತುಗಲಳಿಂದ ರಕ್ಷಿಸಲ್ಪಟ್ಟರೆ ಪೊಲೀಸ್ ವ್ಯವಸ್ಥೆ ನಾಡನ್ನು ಇನ್ನಷ್ಟು ರಕ್ಷಣೆ ಮಾಡುವಲ್ಲಿ ಯಶಸ್ಸು ಸಾಧಿಸಲಿದೆ. ಪೊಲೀಸ್ ವ್ಯವಸ್ಥೆ ಮೇಲೆ ಅಪಾರ ಗೌರವ ಹೊಂದಿರುವ ನಮ್ಮ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ಮತ್ತು ಗೃಹ ಸಚಿವರಾದ ಜಿ. ಪರಮೇಶ್ವರ್ ರವರು ಪೋಲೀಸರ ಸಮನ್ವಯ ಸಾದಿಸಿ ಅವರ ಬೇಡಿಕೆಗಳನ್ನು ಪೂರೈಸುವ ಮನಸ್ಸು ಹೊಂದಿದ್ದಾರೆ.

 

LEAVE A REPLY

Please enter your comment!
Please enter your name here