ಬೆಂಗಳೂರು ಪೂರ್ವ ತಾಲ್ಲೂಕು ರೆಡ್ಡಿ ಜನ ಸಂಘ ಇಂದು ಕಲ್ಯಾಣ ನಗರದಲ್ಲಿ ಶ್ರೀ ವೇಮನ ರೆಡ್ಡಿರವರ 612 ನೇ ಜನ್ಮದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು:
ಬೆಂಗಳೂರು: ಸರ್ವ ಸಂಘ ಪರಿತ್ಯಾಗಿಯಾಗಿ ಲೋಕ ಕಲ್ಯಾಣದಲ್ಲಿ ಅಧ್ಯಾತ್ಮಿಕ ತತ್ವಗಳ ಭೋದನೆಗಳಿಂದ ಖ್ಯಾತಿ ಪಡೆದು ಸಮಾಜದಲ್ಲಿ ಆಧ್ಯಾತ್ಮಿಕ ಗುರುವಾದ ಶ್ರೀ ವೇಮನ ರೆಡ್ಡಿ ಯೋಗಿ ರವರ 612 ನೆ ಜನ್ಮ ದಿನಾಚರಣೆಯನ್ನು ಇಂದು ಬೆಳಿಗ್ಗೆ, ಕಲ್ಯಾಣ ನಗರದ 80 ಅಡಿ ರಸ್ತೆಯಲ್ಲಿ ಬೆಂಗಳೂರು ಪೂರ್ವ ತಾಲ್ಲೂಕು ರೆಡ್ಡಿ ಜನ ಸಂಘ ಆಯೋಜನೆ ಮಾಡಿತ್ತು. ಸಾರಿಗೆ ಸಚಿವ ರಾಮಲಿಂಗರೆಡ್ಡಿರವರು ದೀಪ ಹಚ್ಚಿ ಶ್ರೀ ವೇಮನ ಯೋಗಿ ರವರಿಗೆ ಪುಷ್ಪ ಸಮರ್ಪಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು ಮತ್ತು ಇಂದಿನ ವಿಶೇಷತೆಗಾಗಿ ಕರ್ನಾಟಕ ಮೊದಲ ಮುಖ್ಯಮಂತ್ರಿಗಳಾದ ಶ್ರೀ ಕೆ ಸಿ ರೆಡ್ಡಿ ರವರ ಸ್ಮರಣಾರ್ಥವಾಗಿ ಔಟರ್ ರಿಂಗ್ ರಸ್ತೆಯನ್ನು ಶ್ರೀ ಕೆ.ಸಿ.ರೆಡ್ಡಿ ರಸ್ತೆ ಎಂದು ಹೊಸದಾಗಿ ನಾಮಕರಣ ಮಾಡಲಾಯಿತು. ಕಾಯಕ್ರಮದಲ್ಲಿ, ಸಂಘದ ಹೊಸ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ನಂತರ ಸಾರಿಗೆ ಮತ್ತು ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ರವರಿಗೆ, ಮಾಜಿ ರಾಜ್ಯ ಸಭಾ ಸದಸ್ಯರಾದ ಶ್ರೀ ಕೆ ಸಿ ರಾಮೂರ್ತಿರವರಿಗೆ, ಮಾಜಿ ಸಚಿವ ಮತ್ತು ಶಾಸಕರಾದ ಭೈರತಿ ಬಸವರಾಜ್ ರವರಿಗೆ, ಮಾಜಿ ಮಹಾ ಪೌರರಾದ ಶ್ರೀ ಮಂಜುನಾಥ ರೆಡ್ಡಿ, ಪಾಲಿಕೆ ಸದಸ್ಯರಾದ ಶ್ರೀ ಪದ್ಮನಾಭ ರೆಡ್ಡಿ ಮತ್ತು ಗಣೇಶರೆಡ್ಡಿ, ಕೆ.ಸಿ. ರೆಡ್ಡಿ ರವರ ಕುಟುಂಬದವರಿಗೆ ಹಾಗು ಕಾರ್ಯಕ್ರಮದ ಆಯೋಜಕರಾದ ಬೆಂಗಳೂರು ಪೂರ್ವ ತಾಲ್ಲೂಕು ರೆಡ್ಡಿ ಜನ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ರೆಡ್ಡಿ ರವರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಚೇಲ್ಕೆರೆ ಬಾಗದ ಮುಖಂಡರಾದ ಶ್ರೀ ನಾಗರಾಜರೆಡ್ಡಿ, ಸಂಜಯ್ ರೆಡ್ಡಿ,ರಮೇಶ್ ರೆಡ್ಡಿ, ಮಾಜಿ ಬಿಡಿಎ ಸದಸ್ಯ ಜಗದೀಶರೆಡ್ಡಿ, ಬಾಣಸವಾಡಿ ಬಾಲಚಂದ್ರರೆಡ್ಡಿ,ಬಾಬು ರೆಡ್ಡಿ ಹಾಗು ನೂರಾರು ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಬಳಿಕ ಎಲ್ಲಾರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.
ಶ್ರೀ ಯೋಗಿ ವೇಮನ ರೆಡ್ಡಿರವರ ಜನ್ಮದಿನವನ್ನು ನಗರದಲ್ಲಿ ಎಲ್ಲಾ ಭಾಗಗಲ್ಲಿ ಆಚರಿಸಲಾಯಿತು ಮತ್ತು ರವೀಂದ್ರ ಕಲಾಕ್ಷೆತ್ರದಲ್ಲಿ ಮುಖ್ಯ ಮಂತ್ರಿಗಳು ಕಾರ್ಯಕ್ರಮ ಉದ್ಘಾಟನೆ ಮಾಡಿದರು.