ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಟಾಪನೆಗೆ ರಾಮನೂರಿಗೆ ಹರಿದು ಬರುತ್ತಿರುವ ಬರ ಪೂರಾ ಉಡುಗೊರೆಗಳು:

ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಟಾಪನೆಗೆ ರಾಮನೂರಿಗೆ ಹರಿದು ಬರುತ್ತಿರುವ ಬರ ಪೂರಾ ಉಡುಗೊರೆಗಳು:

 

ಅಯೋಧ್ಯ: ಅಯೋಧ್ಯೆ ನಗರವು ತನ್ನ ಆರಾಧ್ಯ ಪ್ರಭು ಶ್ರೀರಾಮನನ್ನು ಸ್ವಾಗತಿಸಲು ಸರ್ವ ರೀತಿಯಲ್ಲಿ ಸಿದ್ಧವಾಗಿದೆ. ಇಲ್ಲಿ ಜನವರಿ 22 ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯುವುದರೊಂದಿಗೆ ಶ್ರೀರಾಮನು ಬಾಲ ರೂಪದಲ್ಲಿ ಅಯೋಧ್ಯೆಯಲ್ಲಿ ನೆಲೆಸುತ್ತಾನೆ. ಹೀಗಿರುವಾಗ ಶ್ರೀರಾಮನ ದೇಗುಲಕ್ಕೆ ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಉಡುಗೊರೆಗಳು ಬರುತ್ತಿವೆ. ನೇಪಾಳದ ಜನಕ್‌ಪುರ, ಭಗವಾನ್ ರಾಮನ ಅತ್ತೆಯ ಮನೆ ಮತ್ತು ತಾಯಿ ಸೀತೆಯ ಜನ್ಮಸ್ಥಳದಿಂದ ಬಹಳಷ್ಟು ಉಡುಗೊರೆಗಳು ಅಯೋಧ್ಯೆಗೆ ತಲುಪುತ್ತಿವೆ. ಶ್ರೀಲಂಕಾದ ನಿಯೋಗವು ಅಯೋಧ್ಯೆಗೆ ಭೇಟಿ ನೀಡಿ ಅಶೋಕ ವನದಿಂದ ಬಂಡೆಯನ್ನು ಉಡುಗೊರೆಯಾಗಿಸಿದೆ. ಶ್ರೀಲಂಕಾದ ಅಶೋಕ ವನವು ರಾವಣ ಮಾತೆ ಸೀತೆಯನ್ನು ಇರಿಸಿದ ಸ್ಥಳ ಎಂದು ರಾಮಾಯಣದಲ್ಲಿ ಹೇಳಲಾಗಿದೆ. ಇದಲ್ಲದೇ ಬಿಹಾರದ ಮಿಥಿಲಾದಿಂದ ಜನಕ್ ದುಲಾರಿ ಸೀತಾ ಮಾತೆ ಮತ್ತು ಅಳಿಯ ಪ್ರಭು ರಾಮ್ ಅವರಿಗೆ ಸುಂದರವಾದ ಉಡುಗೊರೆಗಳು ಬರುತ್ತಿವೆ. ಇಂತಹ ಅನೇಕ ಉಡುಗೊರೆಗಳು ದೇಶದಾದ್ಯಂತ ಪ್ರತಿನಿತ್ಯ ಅಯೋಧ್ಯೆಗೆ ತಲುಪುತ್ತಿವೆ. ಈಗಾಗಲೇ ಅಯೋಧ್ಯೆಗೆ ಯಾವೆಲ್ಲಾ ಉಡುಗೊರೆಗಳು ಬಂದು ಸೇರಿವೆ ಎನ್ನುವುದನ್ನು ನಾವಿಲ್ಲಿ ನೋಡೋಣ..

*ಮಥುರಾದಿಂದ 200 ಕೆಜಿ ಲಡ್ಡು​*

ಶ್ರೀಕೃಷ್ಣನ ಜನ್ಮಸ್ಥಳವಾದ ಮಥುರಾದಿಂದ ರಾಮಮಂದಿರ ನಿರ್ಮಾಣಕ್ಕಾಗಿ 200 ಕೆಜಿಯಷ್ಟು ಲಡ್ಡುಗಳು ಅಯೋಧ್ಯೆಗೆ ಆಗಮಿಸುತ್ತಿವೆ. ಈ ಲಡ್ಡುಗಳ ಸಂಖ್ಯೆ 1.11 ಲಕ್ಷ ಎಂದು ಹೇಳಲಾಗಿದೆ. ವಿಶೇಷ ಒಣ ಹಣ್ಣುಗಳು ಮತ್ತು ಸಕ್ಕರೆ ಮಿಠಾಯಿಗಳಿಂದ ಈ ಲಡ್ಡುಗಳನ್ನು ತಯಾರಿಸಲಾಗುವುದು ಎಂದು ಹೇಳಲಾಗುತ್ತಿದೆ.

ಭಕ್ತ ನ ಕೊಡುಗೆಯಾಗಿ 108 ಅಡಿ ಉದ್ದದ ಅಗರಬತ್ತಿ​:

ರಾಮಮಂದಿರಕ್ಕೆ 108 ಅಡಿ ಉದ್ದದ ಅಗರಬತ್ತಿಯನ್ನು ಗುಜರಾತ್‌ನ ವಡೋದರಾದಿಂದ ಭಗವಾನ್ ರಾಮನ ದೇವಾಲಯಕ್ಕೆ ಬಂದಿವೆ. ಈ ಅಗರಬತ್ತಿಯು ತುಂಬಾ ಸುಂದರ ಮತ್ತು ದೊಡ್ಡದಾಗಿದೆ ಮತ್ತು ಇದರ ತೂಕ ಸುಮಾರು 3600 ಕೆ.ಜಿಯಷ್ಟಿದೆ. ಒಮ್ಮೆ ಹಚ್ಚಿದರೆ ಸುಮಾರು ಒಂದೂವರೆಯಿಂದ 2 ತಿಂಗಳ ಕಾಲ ಈ ಅಗರಬತ್ತಿ ಉರಿಯುತ್ತದೆ ಎಂದು ಹೇಳಲಾಗುತ್ತಿದೆ. ಈ ಅಗರಬತ್ತಿಯ ಬೆಲೆ 5 ಲಕ್ಷ ರೂಪಾಯಿ ಎನ್ನಲಾಗಿದೆ.

44 ಅಡಿ ಎತ್ತರದ ಸುಂದರ ಧ್ವಜಸ್ತಂಭ:

ರಾಮಮಂದಿರದ ಶಿಖರದಲ್ಲಿ ಗುಜರಾತ್‌ನಲ್ಲಿ ತಯಾರಿಸಲಾದ ವಿಶಿಷ್ಟ ಧ್ವಜಸ್ತಂಭವನ್ನು ಸ್ಥಾಪಿಸಲಾಗಿದೆ. ಇದರ ಉದ್ದ 44 ಅಡಿ ಮತ್ತು ಅದರ ತೂಕ ಸುಮಾರು 5.5 ಟನ್ ಎಂದು ಹೇಳಲಾಗುತ್ತದೆ. ಗುಜರಾತ್ ಮುಖ್ಯಮಂತ್ರಿ ಭೂಪೇಶ್ ಪಟೇಲ್ ಅವರು ಈ ಧ್ವಜಸ್ತಂಭವನ್ನು ಅಯೋಧ್ಯೆಗೆ ಕಳುಹಿಸಿದ್ದಾರೆ.

1100 ಕೆಜಿ ಬೃಹತ್ ದೀಪ ​:

ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಉತ್ಸವದ ದಿನದಂದು, ದೇಶದಾದ್ಯಂತ ತುಪ್ಪದ ದೀಪಗಳನ್ನು ಬೆಳಗಿಸಲಾಗುತ್ತದೆ, ಆದರೆ ರಾಮನ ಅಯೋಧ್ಯೆಯಲ್ಲಿ ಅತಿದೊಡ್ಡ ದೀಪವನ್ನು ಬೆಳಗಿಸಲಾಗುತ್ತದೆ. ಬರೋಡದ ರೈತ ಅರವಿಂದ್ ಭಾಯ್ ಪಟೇಲ್ ಈ ಬೃಹತ್ 1100 ಕೆಜಿ ದೀಪವನ್ನು ಅಯೋಧ್ಯೆಗೆ ಕಳುಹಿಸಿದ್ದಾರೆ. ಈ ದೀಪ ತಯಾರಿಕೆಯಲ್ಲಿ ಮಣ್ಣು ಮತ್ತು ಪಂಚಧಾತು ಬಳಸಲಾಗಿದೆ. ಈ ದೀಪಕ್ಕೆ ಒಂದೇ ಬಾರಿಗೆ 850 ಲೀಟರ್ ತುಪ್ಪ ಸುರಿಯಬಹುದು ಎಂದು ಹೇಳಲಾಗುತ್ತಿದೆ.

   6 ಅಡಿ ಎತ್ತರ 5 ಅಡಿ ಅಗಲದ 2100 ಕೆಜಿ ಗಂಟೆ ಕೊಡುಗೆ:

ರಾಮ ಮಂದಿರದಲ್ಲಿ 2100 ಕೆ.ಜಿ ತೂಕದ ಗಂಟೆಯನ್ನು ಅಳವಡಿಸಲಾಗುತ್ತಿದ್ದು, ಇದು ದೇವಾಲಯದ ಅಂದವನ್ನು ಹೆಚ್ಚಿಸಲಿದೆ. ಇದನ್ನು ತಯಾರಿಸಲು 2 ವರ್ಷಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಅದರ ತಯಾರಿಕೆಯಲ್ಲಿ ಅಷ್ಟಧಾತುವನ್ನು ಬಳಸಲಾಗಿದೆ. ಈ ಅಷ್ಟಧಾತು ಗಂಟೆಯು 6 ಅಡಿ ಎತ್ತರ ಮತ್ತು 5 ಅಡಿ ಅಗಲವನ್ನು ಒಳಗೊಂಡಿದೆ. ಇದರ ಬೆಲೆ 10 ಲಕ್ಷ ರೂಪಾಯಿಗಳಾಗಿದ್ದು, ಇದರ ಸದ್ದು ಹಲವಾರು ಕಿಲೋಮೀಟರ್ ದೂರಕ್ಕೆ ಕೇಳಿಸುತ್ತಿದೆ.

ಅಲಿಘರ್‌ನ 10 ಅಡಿ ಎತ್ತರದ ಬೀಗ​:

ಭಗವಾನ್ ರಾಮನ ದೇವಾಲಯದ ಭದ್ರತೆಗಾಗಿ ಅಲಿಗಢದಿಂದ 10 ಅಡಿ ಎತ್ತರದ ಬೀಗವನ್ನು ತರಲಾಗಿದೆ. ಅಲಿಘರ್‌ನ ಬೀಗ ತಯಾರಿಸುವ ಕೈಗಾರಿಕೋದ್ಯಮಿ ಸತ್ಯಪ್ರಕಾಶ್ ಶರ್ಮಾ ಅವರು ತಮ್ಮ ಕೈಗಳಿಂದ ರಾಮ ಮಂದಿರಕ್ಕೆ ಈ ವಿಶಿಷ್ಟ ಬೀಗವನ್ನು ಸಿದ್ಧಪಡಿಸಿದ್ದಾರೆ. ಈ ಬೀಗದ ತೂಕ 400 ಕೆ.ಜಿ. ಇದು ವಿಶ್ವದ ಅತಿದೊಡ್ಡ ಬೀಗ ಮತ್ತು ಬೀಗದ ಕೈಯಾಗಿದ್ದು. ಅಯೋಧ್ಯೆ ರಾಮ ಮಂದಿರ ಟ್ರಸ್ಟ್‌ಗೆ ಇದನ್ನು ಉಡುಗೊರೆಯಾಗಿ ನೀಡಲಾಗಿದೆ.

ಲಕ್ನೋದಲ್ಲಿ ತಯಾರಾಗಿ ಬಂದ ವಿಶಿಷ್ಟ ಗಡಿಯಾರ​:

ಲಕ್ನೋದಿಂದ ರಾಮಮಂದಿರಕ್ಕೆ ವಿಶಿಷ್ಟ ಗಡಿಯಾರವನ್ನು ಕಳುಹಿಸಲಾಗಿದೆ. ಈ ಗಡಿಯಾರವನ್ನು ಲಕ್ನೋದ ತರಕಾರಿ ಮಾರಾಟಗಾರರು ಸಿದ್ಧಪಡಿಸಿದ್ದಾರೆ. ಈ ಗಡಿಯಾರವು ಒಂದೇ ಸಮಯದಲ್ಲಿ 8 ದೇಶಗಳ ಸಮಯವನ್ನು ಸೂಚಿಸುತ್ತದೆ. ಈ ಗಡಿಯಾರವು ಭಾರತ, ಟೋಕಿಯೋ, ಮಾಸ್ಕೋ, ದುಬೈ, ಬೀಜಿಂಗ್, ಸಿಂಗಾಪುರ ಮತ್ತು ಮೆಕ್ಸಿಕೋ ಸಿಟಿ, ವಾಷಿಂಗ್ಟನ್ ಡಿಸಿಯ ಸಮಯವನ್ನು ಏಕಕಾಲದಲ್ಲಿ ತೋರಿಸುತ್ತದೆ.

ಸೀತಾ ದೇವಿಗೆ ವಿಶೇಷ ಸೀರೆ:

ಸೂರತ್‌ನ ಕಾವ್ಡಾ ಉದ್ಯಮಿಯೊಬ್ಬರು ಸೀತಾ ಮಾತೆಗೆ ವಿಶಿಷ್ಟವಾದ ಸೀರೆಯನ್ನು ಸಿದ್ಧಪಡಿಸಿದ್ದಾರೆ. ಇದರಲ್ಲಿ ಅಯೋಧ್ಯೆಯ ದೇವಾಲಯಗಳು ಮತ್ತು ದೇವರ ಜೀವನಾಧಾರಿತ ಚಿತ್ರಗಳನ್ನು ಚಿತ್ರಿಸಲಾಗಿದೆ. ಇದಲ್ಲದೆ, ಸೂರತ್‌ನ ವಜ್ರದ ವ್ಯಾಪಾರಿಯೊಬ್ಬರು 5,000 ಅಮೇರಿಕನ್ ವಜ್ರಗಳು ಮತ್ತು 2 ಕೆಜಿ ಬೆಳ್ಳಿಯನ್ನು ಬಳಸಿ ರಾಮಮಂದಿರಕ್ಕೆ ವಿಶಿಷ್ಟವಾದ ಹಾರವನ್ನು ಕಳುಹಿಸಿ ಅಪಾರ ಭಕ್ತಿ ಮೆರೆದಿದ್ದಾರೆ.

ಗುಜರಾತ್ ನಿಂದ ಬೃಹತ್‌ ನಗಾರಿ​:

ಗುಜರಾತ್‌ನ ದರ್ಯಾಪುರದಿಂದ 56 ಇಂಚು ಅಗಲದ ಚಿನ್ನ ಲೇಪಿತ ನಗಾರಿಯನ್ನು ಅಯೋಧ್ಯೆ ರಾಮ ಮಂದಿರದಲ್ಲಿ ಸ್ಥಾಪಿಸಲಾಗುವುದು. ಗುಜರಾತ್‌ನ ದರಿಯಾಪುರದಲ್ಲಿರುವ ಅಖಿಲ ಭಾರತ ದಬ್ಗಾರ್ ಸಮಾಜದಿಂದ ಈ ನಗಾರಿಯನ್ನು ರಾಮ ಮಂದಿರಕ್ಕೆ ಉಡುಗೊರೆಯಾಗಿ ನೀಡಲಾಗಿದೆ.

ತೆಲಂಗಾಣದಿಂದ ಚಿನ್ನದ ಪಾದರಕ್ಷೆಗಳು​:

ಭಕ್ತಾದಿಗಳು ತಮ್ಮ ಭಗವಾನ್ ರಾಮನಿಗೆ ಹೈದರಾಬಾದ್‌ನಿಂದ ಚಿನ್ನದ ಪಾದುಕೆಗಳನ್ನು ತರುತ್ತಿದ್ದಾರೆ. ತನ್ನ ಕರಸೇವಕ ತಂದೆಯ ಆಸೆಯನ್ನು ಪೂರೈಸಲು, ಹೈದರಾಬಾದ್‌ನ 64 ವರ್ಷದ ಚಲ್ಲಾ ಶ್ರೀನಿವಾಸ ಶಾಸ್ತ್ರಿ ಅವರು ಅಯೋಧ್ಯೆಗೆ ಇದನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ.

ಸೋಮವಾರ ರಾಮ ಪ್ರಭು ಪ್ರಾಣ ಪ್ರತಿಷ್ಟಾಪನೆ ಸಲುವಾಗಿ ಮೋದಿ ದೇಶದ ವಿವಿಧ ಬಾಗಗಳಲ್ಲಿ ಪ್ರಭು ಶ್ರೀರಾಮ ಮತ್ತು ಸೀತಾ ಮಾತಾ ಸಂಚರಿಸಿರುವ ಪ್ರದೇಶ ಮತ್ತು ರಾಮಶ್ವರಂ ನಲ್ಲಿ ಸೀತಾ ರಾಮ ಪೂಜೆ ಸಲ್ಲಿಸಿದ್ದ ಶ್ರೀ ರಾಮೇಶ್ವರಂ ಲಿಂಗದ ಪೂಜೆ ಸಲ್ಲಿಸಿ,ದೇವಾಲಯದಲ್ಲಿ ಪುಣ್ಯ ನದಿಗಳ ಪುಣ್ಯ ಸ್ನಾನ ಮಾಡಿದರು. ಅಯೋಧ್ಯಯಲ್ಲಿ ನಮೆಲ್ಲರ ಆರಾಧ್ಯ ದೈವ ಶ್ರೀ ರಘು ರಾಮನ ಪ್ರಾಣ ಪ್ರತಿಷ್ಠಪನೆಗೆ ಸರ್ವ ರೀತಿಯಲ್ಲೂ ಸರ್ವ ಸಿದ್ಧತೆ ನಡೆಯುತ್ತಿದ್ದೂ ಅಯೋಧ್ಯ ರಾಮನ ದೇವಾಲಯದ ಪ್ರತಿ ಹಂತದಲ್ಲೂ ಕರುನಾಡಿನ ಪಾತ್ರ ಪ್ರಮುಖವಾಗಿದ್ದು ಶ್ರೀ ರಾಮನ ಕೃಪೆಯೇ ಆಗಿದ್ದು ಕರುನಾಡು ಧನ್ಯತೆ ಪಡೆದಿದೆ.

 

LEAVE A REPLY

Please enter your comment!
Please enter your name here

ಇತ್ತೀಚಿನ ಪೋಸ್ಟ್

ನೌಫಲ್ ಎಫ್‌.ಎನ್ ಸಿಡಿಲಬ್ಬರದ ಬ್ಯಾಟಿಂಗ್: ಸಿಎಫ್‌ಎಮ್‌ ಹೀರೋಸ್ ಸೆಮಿಫೈನಲ್‌ ಆಸೆ ಜೀವಂತ

ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (ರಿ) ವತಿಯಿಂದ, ಜಾಕ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ...

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಇರಿತ

ಮುಂಬಯಿ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವುನಿಂದ ದಾಳಿ...

ದಾಳಿಂಬೆ ಸೇವಿಸಿ ಮತ್ತು ಅನೇಕ ಪ್ರಯೋಜನಗಳನ್ನು ಪಡೆಯಿರಿ

ದಾಳಿಂಬೆಯಲ್ಲಿ ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಿದ್ದು ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ದಾಳಿಂಬೆಯಲ್ಲಿರುವ ವಿಟಮಿನ್...

ಲಾಸ್ ಏಂಜಲೀಸ್‌ನಲ್ಲಿ ಮತ್ತಷ್ಟು ಆವರಿಸಿದ ಕಾಡ್ಗಿಚ್ಚು 12,000ಕ್ಕೂ ಅಧಿಕ ಕಟ್ಟಡಗಳು ಭಸ್ಮ

ಕ್ಯಾಲಿಫೋರ್ನಿಯಾ: ಭೀಕರ ಕಾಡ್ಗಿಚ್ಚಿಗೆ ಲಾಸ್ ಏಂಜಲೀಸ್ ನಲ್ಲಿ ಈವರೆಗೆ ಕನಿಷ್ಠ 16...

ದ.ಕ ಜಿಲ್ಲೆ: ಯುವಕನ ಮೇಲೆ ಮಾರಕಾಸ್ತ್ರಗಳಿಂದ ಭೀಕರ ದಾಳಿ, ಕೊಲೆಗೆ ಯತ್ನ

ಸುಳ್ಯ: ದ.ಕ ಜಿಲ್ಲೆಯ ಬೆಳ್ಳಾರೆ ಪೇಟೆಯಲ್ಲಿ ಮತ್ತೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅಟ್ಟಹಾಸ...

ವಿಷಯಗಳು

ನೌಫಲ್ ಎಫ್‌.ಎನ್ ಸಿಡಿಲಬ್ಬರದ ಬ್ಯಾಟಿಂಗ್: ಸಿಎಫ್‌ಎಮ್‌ ಹೀರೋಸ್ ಸೆಮಿಫೈನಲ್‌ ಆಸೆ ಜೀವಂತ

ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (ರಿ) ವತಿಯಿಂದ, ಜಾಕ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ...

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಇರಿತ

ಮುಂಬಯಿ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವುನಿಂದ ದಾಳಿ...

ದಾಳಿಂಬೆ ಸೇವಿಸಿ ಮತ್ತು ಅನೇಕ ಪ್ರಯೋಜನಗಳನ್ನು ಪಡೆಯಿರಿ

ದಾಳಿಂಬೆಯಲ್ಲಿ ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಿದ್ದು ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ದಾಳಿಂಬೆಯಲ್ಲಿರುವ ವಿಟಮಿನ್...

ಲಾಸ್ ಏಂಜಲೀಸ್‌ನಲ್ಲಿ ಮತ್ತಷ್ಟು ಆವರಿಸಿದ ಕಾಡ್ಗಿಚ್ಚು 12,000ಕ್ಕೂ ಅಧಿಕ ಕಟ್ಟಡಗಳು ಭಸ್ಮ

ಕ್ಯಾಲಿಫೋರ್ನಿಯಾ: ಭೀಕರ ಕಾಡ್ಗಿಚ್ಚಿಗೆ ಲಾಸ್ ಏಂಜಲೀಸ್ ನಲ್ಲಿ ಈವರೆಗೆ ಕನಿಷ್ಠ 16...

ಸಂಬಂಧಿತ ಲೇಖನಗಳು

ಜನಪ್ರಿಯ ಲೇಖನಗಳು

ಇತ್ತೀಚಿನ ಪೋಸ್ಟ್