ಭರತ್ ಖಂಡವೇ ಎದುರು ನೋಡುತಿದ್ದ ಪಾವನ ರಾಮರ ಪ್ರಾಣ ಪ್ರತಿಷ್ಠೆಗೆ ಸಾಕ್ಷಿಯಾದ ಅಯೋಧ್ಯ…!
ನವದೆಹಲಿ: ಪ್ರಪಂಚವೇ ಎದುರು ನೋಡುತ್ತಿದ್ದ ರಘು ರಾಮ ದಶರಥ ರಾಮನ ಜನ್ಮ ಸ್ಥಳ ಅಯೋದ್ಯೆಯಲ್ಲಿ 500 ವರ್ಷಗಳಿಂದ ಹಿಂದುಗಳು ಕಾತರದಿಂದ ಕಾಯುತ್ತಿದ್ದ ಶ್ರೀ ರಾಮ ಪ್ರಾಣ ಪ್ರತಿಷ್ಠ ಮಹೋತ್ಸವ ಇಂದು ನೂತನ ಭವ್ಯ ರಾಮ ಮಂದಿರದಲ್ಲಿ ಹಿಂದೂ ಶಾಸ್ತ್ರದಂತೆ ಯಶಸ್ವಿಯಾಗಿ ನೆರವೇರಿತು.
ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಗೆ ದೇಶದ ವಿವಿಧ ರಂಗಗಳ ಪ್ರಮುಖ ಗಣ್ಯರು ಪಾಲ್ಗೊಂಡು ಶ್ರೀ ಕರುಣಾ ರಾಮನ ಪೂಜಾ ಕಾರ್ಯವನ್ನು ಅಯೋದ್ಯೆಯಲ್ಲಿ ಕಣ್ ತುಂಬಿಸಿಕೊಂಡು ಪುನೀತರಾದರು.
ದೇಶದ ಮೂಲೆ ಮೂಲೆಯಲ್ಲಿ ಶ್ರೀರಾಮ ನಾಮ ಮತ್ತು ವಿಶೇಷ ಪೂಜಾ ಕಾರ್ಯಕ್ರಮ ನಡೆಯುತ್ತಿದ್ದೂ ಇಂದು ಭರತ ಮಾತೆ ಧನ್ಯವಾಯಿತು. ರಘು ರಾಮನ ಪ್ರಾಣ ಪ್ರತಿಷ್ಠಾಪನೆ ನೋಡಿದ ಪ್ರಪಂಚದ ಎಲ್ಲರ ಜನ್ಮ ಪುನೀತವಾಗಿದ್ದು ಈ ಶತಮಾನದ ಅದೃಷ್ಟವೆ ಆಗಿದೆ. ಪ್ರಭು ಶ್ರೀ ರಾಮ ಎಲ್ಲರನ್ನು ಕರುಣಿಸಲಿ ಮತ್ತು ಕಾಪಾಡಲಿ ಎಂದು ಎಲ್ಲರೂ ಅವನನ್ನು ಭಜಿಸಿ ಧನ್ಯರಾಗಲಿ ಎಂದು ನಾವು ಭಯಸುತ್ತೇವೆ.