Home ಕ್ರೀಡಾಸುದ್ದಿ ಚುನಾವಣೆಯಲ್ಲಿ ಒಸ್ತಿಲಲ್ಲಿ ರಾಜಕೀಯ ಪಕ್ಷಗಳು ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ

ಚುನಾವಣೆಯಲ್ಲಿ ಒಸ್ತಿಲಲ್ಲಿ ರಾಜಕೀಯ ಪಕ್ಷಗಳು ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ

0
ಚುನಾವಣೆಯಲ್ಲಿ ಒಸ್ತಿಲಲ್ಲಿ ರಾಜಕೀಯ ಪಕ್ಷಗಳು ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ

ಮಂಡ್ಯ: ಚುನಾವಣೆಯಲ್ಲಿ ಒಸ್ತಿಲಲ್ಲಿ ರಾಜಕೀಯ ಪಕ್ಷಗಳು ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡುವುದು ಸಹಜ ಆದರೆ ಈಗ ಧರ್ಮದ ಹೆಸರಲ್ಲಿ ಆರೋಪ ಕಿತ್ತಾಟ ದಿನಕ್ಕೊಂದು ತಿರುವು ಪಡೆದುಕೊಂಡು ರಾಜಕೀಯ ಕೆಸರೆರೆಚಾಟ ಶುರುವಾಗಿದೆ. ಮಂಡ್ಯದಲ್ಲಿ ಕೆರಗೋಡಿನಲ್ಲಿ ಹನುಮ ಧ್ವಜ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಂಡ್ಯ ಕಾಂಗ್ರೆಸ್‌ ಶಾಸಕ ರವಿಕುಮಾರ ಗಣಿಗ ಅವರ ಭಾವ ಚಿತ್ರವಿರುವ ಫ್ಲೆಕ್ಸ್, ಬ್ಯಾನರ್ ಕಿತ್ತೆಸೆದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕರುನಾಡಿನ ಎಲ್ಲೆಡೆ ಬಿಜೆಪಿ ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ.

 

ಮಂಡ್ಯ, ತಾಲೂಕಿನ ಕೆರಗೋಡಿನಲ್ಲಿ ಹನುಮ ಧ್ವಜ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಒಂದೆಡೆ ಮಂಡ್ಯದ ಕಾಂಗ್ರೆಸ್‌ ಶಾಸಕ ರವಿಕುಮಾರ ಗಣಿಗ ಅವರ ಫ್ಲೆಕ್ಸ್, ಬ್ಯಾನರ್ ಕಿತ್ತೆಸೆದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮತ್ತೊಂದೆಡೆ ರವಿಕುಮಾರ್ ಹಳ್ಳಿಗಳಿಗೆ ತೆರಳಿದ್ದ ವೇಳೆ​ ಬೇರೆ ಬೇರೆ ಗ್ರಾಮದ ಜನರು ಜೈ ಭೀಮ್, ಜೈ ಭಾರತ್ ಎಂದು ಘೋಷಣೆ ಕೂಗಿ ತ್ರಿವರ್ಣ ಧ್ವಜ ನೀಡಿ ಸ್ವಾಗತಿಸಿದ್ದಾರೆ.

ಈ ವೇಳೆ ರಾಷ್ಟ್ರ ಧ್ವಜ ನೀಡಿ ಮಾತನಾಡಿದ ವ್ಯಕ್ತಿಯೋರ್ವ ‘ನಮ್ಮ ದೇಶದ ಬಗ್ಗೆ ಶಾಸಕ ರವಿಕುಮಾರ್ ಗಣಿಗ ಅಭಿಮಾನಹೊಂದಿದ್ದು ತನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. ಜೊತೆಗೆ ಕ್ಷೇತ್ರವನ್ನ‌ ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂದು ಹೊಗಳಿದ್ದಾರೆ.

ಇನ್ನು ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ‘ಒಂದು ಊರಿಗೆ ಬೆಂಕಿ ಹಚ್ಚಲೇಬೇಕು ಎಂದು ಡಿಸೈಡ್ ಮಾಡಿದಾಗ ಏನೇನು ಆಗಬೇಕೋ ಅದು ಆಗಿದೆ. ಭಾರತದಲ್ಲಿ ರಾಷ್ಟ್ರಧ್ವಜ ಹಾರಿಸಿದ್ರೂ ಈ ರೀತಿಯ ವಿರೋಧ ಆಗುತ್ತೆ ಅಂದ್ರೆ ಏನು?, ನಾನು ಕೆರಗೋಡು ಗ್ರಾಮದ ಬಸ್ ಸ್ಯ್ಟಾಂಡ್ ಜಾಗ ನೋಡಲು ಹೋದಾಗ ಆ ಸ್ಥಳ ನೋಡಿದ್ದೆ. ಹನುಮ ದೇವಾಲಯದ ಎದುರು ಆ ಧ್ವಜಸ್ಥಂಬ ಇದೆ. ಇಲ್ಲಿ ಬಸ್ ನಿಲ್ದಾಣ ಆಗುತ್ತದೆ. ಆ ಜಾಗದಲ್ಲಿ ನಾನು ಸ್ತಂಭ ಬೇಡ ಅಂತ ಹೇಳಿದ್ದೆ. ಇದಾದ ಬಳಿಕವೂ ಗೌರಿಶಂಕರ ಟ್ರಸ್ಟ್ ನವರು ಧ್ವಜಸ್ಥಂಬ ನಿರ್ಮಾಣಕ್ಕೆ ಅರ್ಜಿ ಕೊಟ್ಟರು.

ಟ್ರಸ್ಟ್ 16ನೇ ತಾರೀಖು ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜಕ್ಕೆ ಅನುಮತಿ ತಗೆದುಕೊಂಡಿದ್ದಾರೆ. 20ನೇ ತಾರೀಖು ಇವರು ಮತ್ತೊಂದು ಕಾರ್ಡ್ ಪ್ಲೇ ಮಾಡಿ, ಹನುಮಧ್ವಜ ಹಾಕಿಕೊಳ್ಳುತ್ತೇವೆ ಎಂದು ಕೇಳಿ 23ನೇ ತಾರೀಖು ಇಳಿಸೋದಾಗಿ ಅನುಮತಿ ಪಡೆದರು. ಆದರೆ, ಅದನ್ನ ಇಳಿಸದೇ ಉದ್ದಟತನ ಮಾಡಿದ್ದಾರೆ. ಆ ಜಾಗದಲ್ಲಿ ದಲಿತ ಸಂಘಟನೆಯಿಂದ ಬಂದು ಅಲ್ಲಿ ಅಂಬೇಡ್ಕರ್ ಬಾವುಟ ಹಾಕುತ್ತೇವೆ ಎಂದರು. ಅದಾದ ಬಳಿಕ ಒಕ್ಕಲಿಗರು ಬಂದು ಕೆಂಪೇಗೌಡರ ಬಾವುಟ, ಕುರುಬ ಸಂಘಟನೆ ಅವ್ರು ಬಂದು ರಾಯಣ್ಣನ ಬಾವುಟ ಹಾಕ್ತೀವಿ ಅಂದರು, ಹಾಗಾಗಿ ಎಲ್ಲರಿಗೂ ಅವಕಾಶ ಕೊಡಲು ಆಗುತ್ತಾ?, ಇದಕ್ಕೆ ಸ್ಥಳೀಯ ಆಡಳಿತ ಎಲ್ಲದಕ್ಕೂ ತಡೆಯೊಡ್ಡಿ ಹನುಮಾನ್ ಧ್ವಜ ತೆರವು ಮಾಡಿದ್ದಾರೆ. ಆದ್ರೆ, ಕೆಲವರು ಕ್ರಿಮಿನಲ್ ಮೈಂಡ್ ನವರು ಇದನ್ನ ರಾಜಕೀಯಕ್ಕೆ ಬಳಸಿಕೊಂಡರು ಎಂದು ಆರೋಪ ಮಾಡಿದರು.

ಈ ಹನುಮ ಧ್ವಜ ಪ್ರಕರಣ ಇಡೀ ಮಂಡ್ಯ ಬಾಗದಲ್ಲಿ ಕೇಸರಿ ಪಡೆಯ ವಿರೋಧಕ್ಕೆ ಕಾರಣವಾಗಿ ಶಾಸಕ ರವಿ ಗಣಿಗ ಅವರ ವಿರುದ್ಧ ತಿರುಗಿಬಿದ್ದರು. ಕೇಸರಿ ಪಡೆಯ ಹೋರಾಟದಲ್ಲಿ ಹಲವು ಕೇಸರಿ ಪಡೆಗೆ ಪೊಲೀಸರಿಂದ ತಡೆಯೋಡ್ದಲಾಗಿ ಗಲಾಟೆಗಳು ನಡೆದವು ಕೇಸರಿ ಪಡೆಯ ಹೋರಾಟಕ್ಕೆ ಸಾಥ್ ನೀಡಿ ಹೋರಾಟದಲ್ಲಿ ಮಾಜಿ ಮುಖ್ಯ ಮಂತ್ರಿ HD ಕುಮಾರ್ ಸ್ವಾಮಿ ಮತ್ತು ಸಿಟಿ ರವಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.ಇಷ್ಟಕ್ಕೆ ಮುಗಿಯದ ಧ್ವಜ ದಂಗ ಇನ್ಯಾವ ತಿರುವು ಪಡೆಯುತ್ತದೆ ಕಾದು ನೋಡಬೇಕಿದೆ.

 

 

LEAVE A REPLY

Please enter your comment!
Please enter your name here