ಓಂ ಶಕ್ತಿ ದೇವಿಯ ಸನ್ನಿದಾನದಲ್ಲಿ ಮತ್ತೊಮ್ಮೆ ಜಯ ನೀಡೆಂದು ಅನುಗ್ರಹ ಕೋರಿದ ಕೇಂದ್ರ ಸಂಸದ ಪಿ ಸಿ ಮೋಹನ್….!
ಬೆಂಗಳೂರು: ಚುನಾವಣೆ ಸಮೀಪಸುತ್ತಿದ್ದು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಗರಿಗೆದರಿದ ವಾತಾವರಣ ಜೋರಾಗಿದೆ.ಕೇಂದ್ರದಲ್ಲಿ ಸರ್ಕಾರ ಸ್ಥಾಪಿಸಲು ಮತ್ತೆ ವಿಶ್ವ ವಿಖ್ಯಾತ ನಾಯಕ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿಯನ್ನು ಮೂರನೇ ಬಾರಿಗೆ ದೇಶದ ಚುಕ್ಕಾಣಿ ಹಿಡಿಯಲು ಅವರ ಕೈ ಬಲಪಡಿಸಲು ಪಿಸಿ ಮೋಹನ್ ತನ್ನ ಲೋಕಸಭಾ ವ್ಯಾಪ್ತಿಯ ಪ್ರಮುಖ ದೇವಸ್ಥಾನ ಮತ್ತು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ದೇವರಲ್ಲಿ ಆಶಿರ್ವಾದ ಕೋರುತ್ತಿದ್ದಾರೆ. ಅದರಂತೆ ಶುಭ ಶುಕ್ರವಾರವಾದ ಇಂದು ಕಲ್ಯಾಣ ನಗರದ ಸುಪ್ರಸಿದ್ದ ಶ್ರೀ ಓಂ ಶಕ್ತಿ ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಸಾಮಾನ್ಯರಂತೆ ಒಬ್ಬರೇ ಬಂದು ಶ್ರೀ ಓಂ ಶಕ್ತಿ ಅನ್ನ ಪೂರ್ಣೇಶ್ವರಿ ದೇವಿಯಯಲ್ಲಿ ಮತ್ತೊಮ್ಮೆ ಜಯ ನೀಡೆಂದು ಅನುಗ್ರಹ ಕರುಣಿಸೆಂದು ಕೊರಿದ್ದಾರೆ. ಸ್ಥಳದಲ್ಲಿ ಸಂಸದರಿಗೆ ಸ್ಥಳೀಯ ಬಿಜೆಪಿ ಮುಖಂಡರಾದ ಪಿ ಮಂಜುನಾಥ್ ಮತ್ತು ಜನೋಪಕಾರಿ ಎಂ ಸಿ ಶ್ರೀನಿವಾಸ್ ಹಾಗೂ ಇತರರು ಹಾಜರಿದ್ದರು. ಶುಕ್ರವಾರವಾದ ಇಂದು ಎಂದಿನಂತೆ ಸಂಪ್ರದಾಯಿಕವಾಗಿ ಸಂಸದರನ್ನು ಬರಮಾಡಿಕೊಂಡ ಓಂ ಶಕ್ತಿ ದೇವಾಲಯದ ಅಧ್ಯಕ್ಷರಾದ ಪಿ ಬಾಬು ರವರು ಮತ್ತು ಸೇವಕರು ಪಿಸಿ ಮೋಹನ್ ಅವರನ್ನು ಕಳಶ ನೀಡುವ ಮೂಲಕ ಆದರದಿಂದ ಬರಮಾಡಿಕೊಂಡು ದೇವಿಯ ದರ್ಶನ ಮಾಡಿಸಿ ಶಾಲು ಹೊದಿಸಿ ಸನ್ಮಾನ ಮಾಡಿದರು.
ಬೆಂಗಳೂರು ಕೇಂದ್ರ ಸಂಸದರಾಗಿ ಎರಡು ಬಾರಿ ಸುಮಾರು 10 ವರ್ಷಗಳ ಕಾಲ ಪಿಸಿ ಮೋಹನ್ ರವರು ಈ ಬಾಗದಲ್ಲಿ ಸೋಲಿಲ್ಲದ ಸರದಾರರಾಗಿದ್ದು ಈಗ ತನ್ನ ಅವಧಿಯಲ್ಲಿ ಮಾಡಿರುವ ಉತ್ತಮ ಜನಪ್ರಿಯ ಕೆಲಸಗಳನ್ನು ಮಂದಿಟ್ಟುಕೊಂಡು ಮತ್ತೊಮ್ಮೆ ಜನ ಆಶೀರ್ವಾದ ನೀಡಬೇಕೆಂದು ಕೋರುತ್ತಿದ್ದಾರೆ. ಕೇಂದ್ರಭಾಗದಲ್ಲಿ ಸಬ್ ಅರ್ಬನ್ ರೈಲ್ವೆ ನಿಲ್ದಾಣದ ಸ್ಥಾಪನೆಗೆ ಇವರ ಪಾತ್ರ ಅತ್ಯಂತ ಪ್ರಮುಖವಾಗಿದೆ.