ಆಧುನಿಕ ತಂತ್ರಜ್ಞಾನದೊಂದಿಗೆ ಟ್ರೈ ಲೈಫ್ ಆಸ್ಪತ್ರೆಯ ಮತ್ತೊಂದು ಶಾಖೆ ಪ್ರಾರಂಭ…..!
ಕಲ್ಯಾಣನಗರ: ಬೆಂಗಳೂರು ಪೂರ್ವ ಭಾಗದಲ್ಲಿ ಹೆಚ್ಚು ಜನಪ್ರಿಯಗಳಿಸಿರುವ ಟ್ರೈ ಲೈಫ್ ಆಸ್ಪತ್ರೆ ಇಂದು ಕಲ್ಯಾಣ ನಗರದಲ್ಲಿ ಮತ್ತೊಂದು ಆಸ್ಪತ್ರೆ ಕೇಂದ್ರವನ್ನು ನೂತನವಾಗಿ ಪ್ರಾರಂಭ ಮಾಡಿದೆ.
ಅತ್ಯಾಧುನಿಕ ತಂತ್ರಜ್ಞಾನ ಮಷೀನರಿ ಮತ್ತು ಅರೋಗ್ಯ ವಿಭಾಗದಲ್ಲಿ ಅತ್ಯಂತ ಪರಿಣಿತ ಪಡೆದಿರುವ ವೈದ್ಯ ಸಿಬ್ಬಂದಿಯನ್ನು ಹೊಳಗೊಂಡಿರುವ ಕೇಂದ್ರ ಇದಾಗಿದ್ದು ಕಲ್ಯಾಣ ನಗರ ಭಾಗದ ಜನ ಸಂತಸ ವ್ಯಕ್ತಪಡಿಸಿದ್ದಾರೆ.
ಟ್ರೈ ಲೈಫ್ ಆಸ್ಪತ್ರೆಯು ಜನರ ಅರೋಗ್ಯಕ್ಕೆ ಹೆಚ್ಚು ಒತ್ತು ನೀಡಿ ತಮ್ಮ ಆಸ್ಪತ್ರೆಗೆ ಬರುವ ರೋಗಿಗಳ ಬಗ್ಗೆ ಹೆಚ್ಚು ಕಾಳಜಿ ಇಟ್ಟು ಅತ್ಯುತ್ತಮ ಚಿಕಿತ್ಸೆ ನೀಡಿ ಗುಣಪಡಿಸುವ ಮೂಲಕ ಜನರ ವಿಶ್ವಾಸಗಳಿಸಿಕೊಂಡಿದೆ.
ಇಂದು ನೂತನ ಶಾಖಾ ಪ್ರಾರಂಭೋತ್ಸವದಲ್ಲಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಮತ್ತು ಮಾಜಿ ಸಚಿವ ಜಿ ಟಿ ದೇವೇಗೌಡ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು ಕಾರ್ಯಕ್ರಮದಲ್ಲಿ ಟ್ರೈ ಲೈಫ್ ಮುಖ್ಯಸ್ಥರಾದ ಶ್ರೀ ಶೀಕಲ್ ರಾಮಚಂದ್ರ ಗೌಡ ಮತ್ತು ಡಾ: ಪ್ರಶಾಂತ್ ರವರು ಮುಖ್ಯ ಅತಿಥಿಗಳಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರು ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರಮುಖರು ಆಗಮಿಸಿ ಟ್ರೈ ಲೈಫ್ ಆಸ್ಪತ್ರೆಗೆ ಶುಭ ಕೋರಿದರು.